ಏಕದಿನ ಸರಣಿಯಲ್ಲಿ ಕೊಹ್ಲಿಗೆ ದಾಖಲೆ ಮುರಿಯುವ ಅವಕಾಶ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ವಿರಾಟ್ ಕೊಹ್ಲಿ ಕಳೆದೆರಡು ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟಿನಲ್ಲಿ ಗಳಿಸಿದ ರನ್ ಕಡಿಮೆಯಿರಬಹುದು, ಆದರೆ ಏಕದಿನ ಕ್ರಿಕೆಟಿನಲ್ಲಿ ಅವರ ರನ್ ಸರಾಸರಿ ಚೆನ್ನಾಗಿಯೇ ಇದೆ. ದ.ಆಫ್ರಿಕಾ ಎದುರಿನ ಏಕದಿನ ಸರಣಿಯಲ್ಲಿ ಕೆಲವು ದಾಖಲೆಗಳನ್ನು ಮುರಿಯುವ ಅವಕಾಶಗಳು ಕೊಹ್ಲಿಗೆ ಒದಗಿವೆ.
ದ.ಆಪ್ರಿಕಾದ ವಿರುದ್ಧ 1287 ರನ್ ಗಳಿಸಿರುವ ಕೊಹ್ಲಿ, ಅಕ ರನ್ ಗಳಿಸಿದ ಭಾರತೀಯನಾಗಿ ನಾಲ್ಕನೇ ಸ್ಥಾನದಲ್ಲಿದ್ದು ಇನ್ನು 27 ರನ್ ಗಳಿಸಿದರೆ ಹರಿಣಗಳ ವಿರುದ್ಧ ಅಕ ರನ್ ಗಳಿಸಿರುವ ದ್ರಾವಿಡ್ (1309) ಮತ್ತು ಗಂಗೂಲಿ (1313) ಅವರನ್ನು ದಾಟಲಿದ್ದಾರೆ. ಎಲ್ಲಾ ದೇಶಗಳನ್ನು ಪರಿಗಣಿಸಿದರೆ ಆಸ್ಟ್ರೇಲಿಯಾದ ಪಾಂಟಿಂಗ್ ಹರಿಣಗಳ ವಿರುದ್ಧ 1879 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.
1287ರಲ್ಲಿ 887 ರನ್‌ಗಳನ್ನು ಕೊಹ್ಲಿ ದ.ಆಫ್ರಿಕಾದ ನೆಲದಲ್ಲೇ ಬಾರಿಸಿದ್ದಾರೆ. ಈ ವಿಷಯದಲ್ಲಿ ದ್ರಾವಿಡ್ (930) ಮತ್ತು ಗಂಗೂಲಿ(1048) ಯನ್ನು ದಾಟಲು ಕೊಹ್ಲಿಗೆ 172 ರನ್‌ಗಳು ಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!