ಟೆಸ್ಟ್ ನಾಯಕತ್ವ ಸಿಕ್ಕಿದರೆ ಗೌರವ: ಕೆ.ಎಲ್.ರಾಹುಲ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಟೆಸ್ಟ್ ತಂಡದ ನಾಯಕತ್ವ ನೀಡಿದರೆ ಅದೊಂದು ದೊಡ್ಡ ಗೌರವ ಎಂಬುದಾಗಿ ಕೆ.ಎಲ್. ರಾಹುಲ್ ಹೇಳಿದ್ದಾರೆ. ಆದರೆ ಸದ್ಯಕ್ಕಂತೂ ತಾನು ಏಕದಿನ ಸರಣಿಯಲ್ಲಿ ಭಾರತವನ್ನು ಮುನ್ನಡೆಸುವ ಕುರಿತಂತೆ ಗಮನ ಕೇಂದ್ರೀಕರಿಸಿರುವುದಾಗಿ ಅವರು ಹೇಳಿದ್ದಾರೆ.
ದೇಶವನ್ನು ಮುನ್ನಡೆಸುವುದು ಯಾರಿಗಾದರೂ ಅತ್ಯಂತ ಗೌರವದ ಸಂಗತಿ. ನಾನೂ ಅದಕ್ಕೆ ಹೊರತಾಗಿಲ್ಲ. ಟೆಸ್ಟ್ ತಂಡದ ನಾಯಕತ್ವ ವಹಿಸಿದರೆ ಅದಕ್ಕಿಂತ ದೊಡ್ಡ ಗೌರವ ಬೇರೆಯಿಲ್ಲ ಎಂದಿದ್ದಾರೆ ರಾಹುಲ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!