ಕೊಹ್ಲಿ ಫಾರ್ಮ್ ಬಗ್ಗೆ ಚಿಂತೆಯಿಲ್ಲ: ರೋಹಿತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದ.ಆಫ್ರಿಕಾದಲ್ಲಿ ಏಕದಿನ ಸರಣಿಯಲ್ಲಿ ಎರಡು ಅರ್ಧ ಶತಕ ಬಾರಿಸಿದ ವಿರಾಟ್ ಕೊಹ್ಲಿ ವೆಸ್ಟಿಂಡೀಸ್ ಎದುರಿನ ಮೂರು ಪಂದ್ಯಗಳಲ್ಲಿ ಗಳಿಸಲಾದುದು ಕೇವಲ 26 ರನ್. ಆದರೆ ಇದರಿಂದ ತಾವೇನೂ ಚಿಂತಿರಾಗಿಲ್ಲ. ಮ್ಯಾನೇಜ್‌ಮೆಂಟ್‌ಗೆ ಕೊಹ್ಲಿಯ ಕುರಿತಂತೆ ತುಂಬು ವಿಶ್ವಾಸವಿದೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಕೊಹ್ಲಿಯ ಆತ್ಮವಿಶ್ವಾಸ ಕುಂದಿದೆಯೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಆಶ್ಚರ್ಯ ತೋರಿದ ರೋಹಿತ್, “ ಏನು, ವಿರಾಟ್ ಕೊಹ್ಲಿಗೆ ಆತ್ಮವಿಶ್ವಾಸದ ಕೊರತೆ ಇದೆ ಅನ್ನುತ್ತೀರಾ? ನೀವು ಏನು ಮಾತನಾಡುತ್ತಿದ್ದೀರಿ?” ಎಂದು ಮರುಪ್ರಶ್ನಿಸಿದರು.
“ದ.ಆಫ್ರಿಕಾ ಎದುರು ಕೊಹ್ಲಿ ಎರಡು ಅರ್ಧ ಶತಕ ಬಾರಿಸಿದ್ದಾರೆ. ಅವರ ಬ್ಯಾಟಿಂಗ್‌ನಲ್ಲಿ ಏನೂ ಸಮಸ್ಯೆಯಿಲ್ಲ. ತಂಡ ಮ್ಯಾನೇಜ್‌ಮೆಂಟ್ ಕೂಡ ಅವರ ಫಾರ್ಮ್ ಕುರಿತಂತೆ ಏನೂ ಚಿಂತಿತವಾಗಿಲ್ಲ” ಎಂದುತ್ತರಿಸಿದರು.
ನಮ್ಮ ಮಧ್ಯಮ ಸರದಿ ಹೇಗೆ ನಿಭಾಯಿಸುವುದೆಂಬುದು ನಮ್ಮ ಚಿಂತೆಯಾಗಿತ್ತಷ್ಟೆ. ಈ ಸರಣಿಯಲ್ಲಿ ನಮ್ಮ ಮಧ್ಯಮ ಸರದಿಯ ಬ್ಯಾಟಿಂಗ್ ಕೂಡ ಉತ್ತಮ ನಿರ್ವಹಣೆ ತೋರಿದೆ ಎಂದು ಅವರು ಹೇಳಿದರು.
ತನ್ನ ಮತ್ತು ವಿರಾಟ್ ಕೊಹ್ಲಿ ಮಧ್ಯೆ ಭಿನ್ನಮತವಿದೆ ಎಂಬ ವದಂತಿಗಳನ್ನೂ ರೋಹಿತ್ ತಳ್ಳಿ ಹಾಕಿದರು. “ಹೊರಗಿನ ವದಂತಿಗಳು ನಮ್ಮ ಮನಸ್ಸು ಕೆಡಿಸುವುದಿಲ್ಲ. ನಾವು ಆ ಕಡೆಗೆ ಗಮನ ಹರಿಸುವುದೇ ಇಲ್ಲ. ಡ್ರೆಸ್ಸಿಂಗ್ ರೂಮ್‌ನಲ್ಲಿ ಅಂತಹ ಯಾವುದೇ ಭಿನ್ನಮತಕ್ಕೆ ಆಸ್ಪದವಿಲ್ಲ ” ಎಂದು ಅವರು ನುಡಿದರು.
ಈ ಸರಣಿಯಲ್ಲಿ ಹಲವಾರು ಆಟಗಾರರು ಉತ್ತಮ ನಿರ್ವಹಣೆ ನೀಡಿದ್ದಾರೆ. ಹೊಸ ಪ್ರಯೋಗಗಳನ್ನು ಮಾಡಿದ್ದು ಯಶಸ್ಸು ನೀಡಿದೆ ಎಂದು ಅವರು ಹೇಳಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!