ಭಾರತೀಯ ಮಹಿಳೆಯರಿಗೆ ಸೋಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಮಹಿಳೆಯರು ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಏಕದಿನ ಪಂದ್ಯವನ್ನು ಸೋತಿದ್ದಾರೆ. ಆಲ್‌ರೌಂಡ್ ಪ್ರದರ್ಶನ ನೀಡಿದ ಕಿವೀಸ್ ವನಿತೆಯರು 62 ರನ್‌ಗಳ ಗೆಲುವು ಸಾಧಿಸಿದರು.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಸುಜಿ ಬೇಟ್ಸ್ ಅವರ ಶತಕ (106) ಮತ್ತು ಆಮಿ ಸಟ್ಟರ್‌ವೈಟ್ ಅವರ ಶತಕಾರ್ಧದ (63) ನೆರವಿನಿಂದ 275 ರನ್ ಗಳಿಸಿತು.
ಇದಕ್ಕುತ್ತರವಾಗಿ ಭಾರತವು 213 ರನ್ ಗಳಿಸಲಷ್ಟೆ ಶಕ್ತವಾಯಿತು. ಮಿಥಾಲಿ ರಾಜ್ 59 ರನ್ ಗಳಿಸಿದರೆ ಯಸ್ತಿಕಾ ಭಾಟಿಯಾ 41 ರನ್ ಗಳಿಸಿದರು. ಉಳಿದವರಿಂದ ಗಮನಾರ್ಹ ಕೊಡುಗೆ ಮೂಡಿಬರಲಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!