VIRAL VIDEO | ಮೈದಾನದಲ್ಲಿ ಮತ್ತೆ ಕಾದಾಡಿ ರೂಲ್ಸ್ ಬ್ರೇಕ್ ಮಾಡಿದ ಕೊಹ್ಲಿ-ಗಂಭೀರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಮಧ್ಯೆ ಮೈದಾನದಲ್ಲಿಯೇ ಮತ್ತೆ ಮಾತಿನ ಚಕಮಕಿ ಏರ್ಪಟ್ಟಿದೆ.

ನಿನ್ನೆ ರಾತ್ರಿ ನಡೆದ ಪಂದ್ಯದಲ್ಲಿ ಲಕ್ನೋ ಎದುರು ಆರ್‌ಸಿಬಿ ಜಯ ಸಾಧಿಸಿತ್ತು. ಈ ವೇಳೆ ನಡೆದ ಹಸ್ತಲಾಘವದ ವೇಳೆ ಆಟಗಾರರು ಮುಖಾಮುಖಿಯಾಗಿದ್ದು, ಪರಸ್ಪರ ಬೈದಾಡಿಕೊಂಡಿದ್ದಾರೆ.

ನವೀನ್ ಉಲ್ ಹಕ್ ವಿರಾಟ್ ಜೊತೆ ವಾಗ್ವಾದಕ್ಕಿಳಿದಿದ್ದರು, ಇದೇ ವೇಳೆ ವೆಸ್ಟ್ ಇಂಡೀಸ್‌ನ ಕೈಲ್ ಮಿಲ್ಸ್ ಜೊತೆ ಕೊಹ್ಲಿ ಮಾತನಾಡುತ್ತಿದ್ದರು.

ಗಂಭೀರ ಬಂದು ಮಿಲ್ಸ್‌ರನ್ನು ಕರೆದುಕೊಂಡು ಹೋದಾಗ ಕೊಹ್ಲಿ ಕೋಪ ಸ್ಫೋಟಗೊಂಡಿತ್ತು. ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿ, ಹತ್ತಿರಕ್ಕೆ ಬಂದರು. ತಕ್ಷಣ ತಂಡದ ಇತರ ಆಟಗಾರರು ಹತ್ತಿರ ಬಂದು ಇಬ್ಬರನ್ನು ದೂರ ಮಾಡಿದರು. ಈ ವರ್ತನೆಗೆ ಇಬ್ಬರಿಗೂ ದಂಡ ವಿಧಿಸಲಾಗಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!