‘ಫಾರ್ಮ್‌ನಲ್ಲಿದ್ದಾಗಲೇ ಕೊಹ್ಲಿ ನಿವೃತ್ತಿ ಪಡೆಯೋದು ಉತ್ತಮ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿರಾಟ್ ಕೋಹ್ಲಿ ನಿವೃತ್ತಿ ಬಗ್ಗೆ ಈಗಾಗಲೇ ಚರ್ಚೆ ಆರಂಭವಾಗಿದೆ.
ಆದರೆ ಬಹಳ ದಿನದ ನಂತರ ಇದೀಗ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್‌ಗೆ ಬಂದಿದ್ದಾರೆ. ಇದೀಗ ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ವಿರಾಟ್ ಕೊಹ್ಲಿ ನಿವೃತ್ತಿಗೆ ಇದು ಸಕಾಲ ಎಂದಿದ್ದಾರೆ.
ಉತ್ತಮ ಫಾರ್ಮ್‌ನಲ್ಲಿದ್ದಾರೆ, ಹೀಗಿರುವಾಗಲೇ ನಿವೃತ್ತಿ ಘೋಷಿಸೋದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂದರ್ಶನವೊಂದರಲಿ ಅಫ್ರಿದಿ ಮಾತನಾಡಿದ್ದು, ಎಲ್ಲರೂ ಒಂದು ದಿನ ನಿವೃತ್ತಿ ಪಡೆಯಲೇಬೇಕು, ಕೊಹ್ಲಿ ಅತ್ಯುತ್ತಮ ಆಟಗಾರ, ಈಗ ಅವರ ಫಾರ್ಮ್ ಅದ್ಭುತವಾಗಿದೆ. ಹೆಮ್ಮೆಯ ವಿದಾಯ ನಮ್ಮ ಗುರಿಯಾಗಿರಬೇಕು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!