ಡುರಾಂಟೋ ಎಕ್ಸ್‌ಪ್ರೆಸ್‌ನಲ್ಲಿ ಮಗುವಿಗೆ ಜನ್ಮ: ತಾಯಿ-ಮಗು‌ ಇಬ್ಬರೂ ಸೇಫ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಜಯವಾಡದಿಂದ-ವಿಶಾಖಪಟ್ಟಣಕ್ಕೆ ವೇಗವಾಗಿ ಚಲಿಸುವ ಡುರಾಂಟೋ ಎಕ್ಸ್‌ಪ್ರೆಸ್ ರೈಲಿನಲ್ಲಿ ಗರ್ಭಿಣಿ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ. ಮಂಗಳವಾರ ತಡರಾತ್ರಿ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಪತಿಗೆ ಏನು ಮಾಡಬೇಕೆಂದು ದಿಕ್ಕು ತೋಚನೆ ಕಂಗಾಲಾಗಿ ಬೋಗಿಯಲ್ಲಿದ್ದವರ ಸಹಾಯ ಕೇಳಿದ್ದಾರೆ. ಅವರು ಸಹಾಯ ಕೇಳಿದ್ದು ಮಹಿಳಾ ವೈದ್ಯೆಯೊಬ್ಬರ ಬಳಿಯೇ. ಆಕೆ ಭಯಪಡದಂತೆ ತಾನು ವೈದ್ಯೆ ಎಂದು ಪರಿಚಯಿಸಿಕೊಂಡು, ಯಾವುದೇ ಪರಿಕರಗಳಿಲ್ಲದೆ ಸುಸೂತ್ರವಾಗಿ ನಾರ್ಮಲ್‌ ಡೆಲಿವರಿ ಮಾಡಿಸಿದ್ದಾರೆ.  ಮಗು ದಂಪತಿ ಕೈ ಸೇರಿದ ಕೂಡಲೇ ಅವರಿಗಾದ ಖುಷಿ ಅಷ್ಟಿಷ್ಟಲ್ಲ. ತಾಯಿ ಮತ್ತು ಮಗುವನ್ನು ರಕ್ಷಿಸಿದ ವೈದ್ಯೆಗೆ ಪ್ರಶಂಸೆಯ ಸುರಿಮಳೆಯಾಯಿತು.

ಡೆಲಿವರಿಗೆ ಇನ್ನೂ ನಾಲ್ಕು ವಾರಗಳು ಬಾಕಿಯಿದ್ದರಿಂದ ಸತ್ಯವತಿ ದಂಪತಿ ರೈಲಿನಲ್ಲಿ ತವರಿಗೆ ತೆರಳುತ್ತಿದ್ದರು. ಬೆಳಗಿನ ಜಾವ 3.35ಕ್ಕೆ ಸತ್ಯವತಿಗೆ ನೋವು ಶುರುವಾಗಿದ್ದು, ಆಕೆಯ ಪತಿ ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಗೀತಂ ವೈದ್ಯಕೀಯ ಕಾಲೇಜಿನ ಹೌಸ್ ಸರ್ಜನ್ ಸ್ವಾತಿ ರೆಡ್ಡಿ ಅವರ ಬಳಿ ಬಂದಿದ್ದಾರೆ. ದಂಪತಿಗೆ ಧೈರ್ಯ ಹೇಳಿ 15 ನಿಮಿಷದಲ್ಲಿ ನಾರ್ಮಲ್ ಡೆಲಿವರಿ ಮಾಡಿಸಿದ್ದಾರೆ. ಅಷ್ಟರಲ್ಲಾಗಲೇ 108 ವಾಹನಕ್ಕೆ ಮಾಹಿತಿ ನೀಡಿ ಮುನದಿನ ನಿಲ್ದಾಣದಲ್ಲಿ ಆಸ್ಪತ್ರೆಗೆ ಕಳಿಸಿಕೊಟ್ಟರು.

ಸತ್ಯವತಿ ದಂಪತಿ ಸ್ವಾತಿ ರೆಡ್ಡಿಗೆ ಕೃತಜ್ಞತೆ ಸಲ್ಲಿಸಿದರು. ಗೀತಂ ಕಾಲೇಜು ಆಡಳಿತ ಮಂಡಳಿ ಡಾ.ಸ್ವಾತಿ ರೆಡ್ಡಿ ಅವರನ್ನು ಅಭಿನಂದಿಸಿದೆ. ರೈಲಿನಲ್ಲಿ ಆಕಸ್ಮಿಕವಾಗಿ ಹೆರಿಗೆಯಾದ ಬಗ್ಗೆ ಡಾ.ಸ್ವಾತಿ ರೆಡ್ಡಿ ಮಾತನಾಡಿದ್ದು, ಅದೊಂದು ಅದ್ಭುತ ಅನುಭವ ಅನಿಸಿದೆ. ಇಷ್ಟು ದಿನ ವೈದ್ಯಕೀಯ ಸಿಬ್ಬಂದಿಯ ಜೊತೆ ಡೆಲಿವರಿ ಮಾಡಿಸಿದ್ದೆ. ಮೊದಲ ಬಾರಿಗೆ ಒಬ್ಬರೇ ಕನಿಷ್ಠ ಇದು ಯಾವುದೇ ಸಲಕರಣೆಗಳಿಲ್ಲದೆ ಯಶಸ್ವಿಯಾಗಿ ಹೆರಿಗೆಯಾಗಿದೆ. ಇದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!