ಶತಕ ಸಿಡಿಸಿ ಹೊಸ ದಾಖಲೆ ಬರೆದ ಕೊಹ್ಲಿ: 13 ಸಾವಿರ ರನ್​ ಪೂರೈಸಿದ ಕಿಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾಕಪ್​ನ ಭಾರತ – ಪಾಕ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅದ್ಭುತ ಶತಕ ಸಿಡಿಸಿದರು. ಈ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ .

ಪಂದ್ಯದಲ್ಲಿ 98 ರನ್​ ಪೂರೈಸಿದ ಕೂಡಲೇ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ 13,000 ಪೂರೈಸಿದ ದಾಖಲೆ ಮಾಡಿದರು. ಈ ಮೂಲಕ 13 ಸಾವಿರ ರನ್​ ಪೂರೈಸಿದ 5 ಬ್ಯಾಟರ್ ಕೊಹ್ಲಿ ಆಗಿದ್ದಾರೆ.

ಇವರಿಗೂ ಮೊದಲು ಭಾರತದ ಪರ ಸಚಿನ್​ ತೆಂಡೂಲ್ಕರ್​ ಈ ಸಾಧನೆ ಮಾಡಿದ್ದರು. ಸಚಿನ್​ ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ ಕಲೆ ಹಾಕಿದ ವಿಶ್ವದ ನಂ.1 ಆಟಗಾರ. ಅವರು ನಿವೃತ್ತಿಯ ವೇಳೆಗೆ ಏಕದಿನ ಕ್ರಿಕೆಟ್​ನಲ್ಲಿ 49 ಶತಕದಿಂದ 18,426 ರನ್​ ಗಳಿಸಿದ ದಾಖಲೆ ಹೊಂದಿದ್ದಾರೆ.

ಸಚಿನ್​ ನಂತರ ಕುಮಾರ ಸಂಗಾಕಾರ (14234), ರಿಕ್ಕಿ ಪಾಂಟಿಂಗ್​ (13704) ಮತ್ತು ಸನತ್​ ಜಯಸೂರ್ಯ (13430) ಇದ್ದಾರೆ. ಈಗ ಇವರೆಲ್ಲ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ತೆಗೆದುಕೊಂಡಿರುವುದರಿಂದ ಕಿಂಗ್​ ಕೊಹ್ಲಿ ಮುಂದಿನ ದಿನಗಳಲ್ಲಿ ಇವರ ಸ್ಕೋರ್​ನ್ನು ಮೀರುವ ಸಾಧ್ಯತೆ ಇದೆ.
ವಿರಾಟ್​ ಕೊಹ್ಲಿ ಕೇವಲ 267 ಇನ್ನಿಂಗ್ಸ್​ನಿಂದ 13000 ಪೋರೈಸಿದ ದಾಖಲೆಮಾಡಿದ್ದಾರೆ.

ಏಕದಿನ ಕ್ರಿಕೆಟ್​ನ 47ನೇ ಶತಕವನ್ನು ವಿರಾಟ್​ ಇಂದಿನ ಪಂದ್ಯದಲ್ಲಿ ಪೂರೈಸಿದ್ದಾರೆ. ಇನ್ನಿಂಗ್ಸ್​ನಲ್ಲಿ ರನ್​ ಮಷಿನ್​ ಕೊಹ್ಲಿ ಕೇವಲ 84 ಬಾಲ್​ನಲ್ಲಿ ಶತಕ ಪೂರೈಸಿದರು.

ಏಕದಿನ ಮಾದರಿಯ ಏಷ್ಯಾಕಪ್​ನಲ್ಲಿ ವಿರಾಟ್​ ಕೊಹ್ಲಿ 4ನೇ ಶತಕ ದಾಖಲಿಸಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸನತ್​ ಜಯಸೂರ್ಯ ಈ ಪಟ್ಟಿಯಲ್ಲಿ 6 ಶತಕಗಳಿಂದ ಅಗ್ರ ಸ್ಥಾನದಲ್ಲಿದ್ದಾರೆ. ಕುಮಾರ್ ಸಂಗಕ್ಕರ್​ ಮತ್ತು ಶೋಯಬ್​ ಮಲ್ಲಿಕ್​ ನಂತರದ 3 ಮತ್ತು 4ನೇ ಸ್ಥಾನವನ್ನು ಕ್ರಮವಾಗಿ ಅಲಂಕರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!