ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 223 ರನ್ಗಳಿಸಿ ಭಾರತ ಆಲೌಟ್ ಆಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ಗಳಾದ ಕೆ ಎಲ್ ರಾಹುಲ್(12) ಮತ್ತು ಮಯಾಂಕ್(15)ರ ವಿಕೆಟ್ ಕಳೆದುಕೊಂಡರು.
ಈ ವೇಳೆ 3ನೇ ವಿಕೆಟ್ಗೆ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಪೂಜಾರ 62 ರನ್ ಸೇರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
43 ರನ್ಗಳಿಸಿದ್ದ ಪೂಜಾರ ಮಾರ್ಕೊ ಜಾನ್ಸನ್ಗೆ ವಿಕೆಟ್ ಒಪ್ಪಿಸಿದರು. ಇವರ ನಂತರ ಬಂದ ರಹಾನೆ ಕೇವಲ 9 ರನ್ಗಳಿಸಿ ರಬಾಡ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
ಮತ್ತೆ 5ನೇ ವಿಕೆಟ್ ರಿಷಭ್ ಪಂತ್27 ರನ್ಗಳಿಸಿ ಮಾರ್ಕೊ ಜಾನ್ಸನ್ ಬೌಲಿಂಗ್ನಲ್ಲಿ ಕೀಗನ್ ಪೀಟರ್ಸನ್ಗೆ ಕ್ಯಾಚ್ ನೀಡಿ ಪೆವಿಲಿಯನ್ಗೆ ಮರಳಿದರು. ನಂತರ ಬಂದ ಅಶ್ವಿನ್ 2 ರನ್ಗಳಿಸಿ ಔಟಾದರು.
ಇತ್ತ ವಿಕೆಟ್ ಉರುಳುತ್ತಿದ್ದರು ಕೊಹ್ಲಿ ಸಹನೆಯಿಂದ ಆಡಿದರು. ಅಂತಿಮವಾಗಿ ಅವರು 201 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 79 ರನ್ಗಳಿಸಿ ರಬಾಡಗೆ 4ನೇ ಬಲಿಯಾದರು.
ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ 4, ಮಾರ್ಕೊ ಜಾನ್ಸನ್ 3 , ಎಂಗಿಡಿ, ಕೇಶವ್ ಮಹಾರಾಜ್ ಹಾಗೂ ಒಲಿವಿಯರ್ ತಲಾ ಒಂದು ವಿಕೆಟ್ ಪಡೆದರು