12-1-2022
ವೃಷಭ: ಕುಟುಂಬ ಸದಸ್ಯರಿಂದ ನೀವಾಗಿ ದೂರ ಸರಿಯಲು ಯತ್ನಿಸದಿರಿ. ಎಲ್ಲರೊಡನೆ ಹೊಂದಾಣಿಕೆ ಸಾಧಿಸಿ. ವೃತ್ತಿಯಲ್ಲಿ ತುಸು ಅಸಮಾಧಾನ ಸಂಭವ.
ಮಿಥುನ:ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಸಂಶಯವಿದೆ. ಅದನ್ನು ಬಿಡಿ. ನೀವು ಯಾವುದೇ ಕಾರ್ಯವನ್ನು ಸಮರ್ಥವಾಗಿ ಪೂರೈಸಬಲ್ಲಿರಿ.
ಕಟಕ: ವೃತ್ತಿಯಲ್ಲಿ ಉದ್ದೇಶ ಸಾಧಿಸಲು ಕಠಿಣ ಶ್ರಮ ಅವಶ್ಯ. ಯಾವುದೂ ಸುಲಭವಾಗಿ ಇಂದು ನಿಮ್ಮ ಕೈಗೆಟುಕದು. ನಿಮ್ಮ ಗುರಿಗೆ ಕೆಲವರ ಅಡ್ಡಗಾಲು ಇರುವುದು.
ಸಿಂಹ: ಒತ್ತಡದ ಪರಿಸ್ಥಿತಿ ಎದುರಿಸಿದರೂ ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಕುಟುಂಬಸ್ಥರ ಜತೆಗಿನ ವಿರಸ ಶಮನ, ಭಿನ್ನಮತ ನಿವಾರಣೆ.
ಕನ್ಯಾ: ಮನೆಯಲ್ಲಿ ಅಭಿಪ್ರಾಯಭೇದ, ವಾಗ್ವಾದ ಸಂಭವ. ಸಹನೆಯಿಂದ ವರ್ತಿಸಿರಿ. ವಿದ್ಯಾರ್ಥಿಗಳ ಪಾಲಿಗೆ ಇಂದು ಗುಣಾತ್ಮಕ ಬೆಳವಣಿಗೆ.
ತುಲಾ: ಮುಖ್ಯ ವಿಷಯದಲ್ಲಿ ಯಾವ ದಾರಿ ಹಿಡಿಯಬೇಕು ಎಂಬ ಬಗ್ಗೆ ದ್ವಂದ್ವವಿದ್ದರೆ ಪ್ರಾಜ್ಞರ ಸಲಹೆ ಪಡೆಯಿರಿ. ಅದರಂತೆ ನಡಕೊಳ್ಳಿ.
ವೃಶ್ಚಿಕ: ಕೆಲಸzಲ್ಲಿನ ನಿಮ್ಮ ದಕ್ಷತೆಯು ಮೆಚ್ಚುಗೆ ಗಳಿಸುವುದು. ಆದರೆ ದಿನದಂತ್ಯಕ್ಕೆ ಉದಾಸೀನತೆ ನಿಮ್ಮನ್ನು ಕಾಡಬಹುದು. ಆಯಾಸ ಇದಕ್ಕೆ ಕಾರಣ.
ಧನು: ಮಾತಿನ ಮೇಲೆ ಇಂದು ಎಚ್ಚರವಿರಲಿ. ಇತರರಿಗೆ ಅಪ್ರಿಯವಾದುದನ್ನು ನೀವು ಅಚಾನಕ್ಕಾಗಿ ಮಾತನಾಡುವ ಸಾಧ್ಯತೆಗಳಿವೆ. ಅದಕ್ಕೆ ಅವಕಾಶ ಕೊಡದಿರಿ.
ಮಕರ: ಆರೋಗ್ಯ ಸಮಸ್ಯೆ ಕಾಡಬಹುದು. ಮಾನಸಿಕವಾಗಿಯೂ ಕುಗ್ಗುವಿರಿ. ಯೋಗ, ಧ್ಯಾನದಂತಹ ದಾರಿಗಳು ನಿಮಗೆ ಪೂರಕವಾಗಬಹುದು.
ಕುಂಭ: ವೃತ್ತಿಯಲ್ಲಿ ಏಳಿಗೆಗೆ ಹೆಚ್ಚು ಆದ್ಯತೆ ಕೊಡುವಿರಿ. ಈ ನಿಟ್ಟಿನಲ್ಲಿ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಕೆ ಬೇಡ. ಅದರಿಂದ ನಿಮಗೆ ಒಳಿತೇ ಆಗುವುದು.
ಮೀನ:ಮನೆಯಲ್ಲಿ ಇಂದು ಸೌಹಾರ್ದಯುತ ವಾತಾವರಣ. ದೊಡ್ಡ ಕೆಲಸದ ಹೊರೆಯೊಂದು ಇಂದು ಕಳಚುವುದು. ಎಲ್ಲವೂ ಸುಗಮ.