ʼಕೋಯಿ ನಹಿ ಹೇ ಟಕ್ಕರ್‌ ಮೇʼ : ಕಾಮನ್‌ ವೆಲ್ತ್‌ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಹುರಿದುಂಬಿಸಿದ ಪರಿಯಿದು !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕಾಮನ್‌ ವೆಲ್ತ್‌ ಕ್ರೀಡಾಕೂಟದಲ್ಲಿ ಭಾಗವಹಿಸಲು ತೆರಳುತ್ತಿರುವ ಭಾರತೀಯ ಕ್ರೀಡಾಪಟುಗಳ ತಂಡದವರೊಂದಿಗೆ ವರ್ಚುವಲ್‌ ಆಗಿ ಮಾತನಾಡಿದ ಪ್ರಧಾನಿ ನರೇಂದ್ರಮೋದಿಯವರು ಅವರಿಗೆ ಸ್ಫೂರ್ತಿ ತುಂಬಿದ್ದಾರೆ.

“ಒತ್ತಡವಿಲ್ಲದೆ ನಿಮ್ಮ ಎಲ್ಲಾ ಸಾಮರ್ಥ್ಯಗಳೊಂದಿಗೆ ಚೆನ್ನಾಗಿ ಆಟವಾಡಿ. ನೀವು ‘ಕೋಯಿ ನಹೀ ಹೈ ತಕ್ಕರ್ ಮೇ, ಕ್ಯೂಂ ಪಡೆ ಹೋ ಚಕ್ಕರ್ ಮೇ’ ಎಂಬ ಮಾತನ್ನು ಕೇಳಿರಬೇಕು, ಆದ್ದರಿಂದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅದೇ ಮನೋಭಾವದಿಂದ ಆಟವಾಡಿ” ಎಂದು ಭಾರತದ CWG 2022 ತಂಡಕ್ಕೆ ಪ್ರಧಾನಿ ಮೋದಿ ಹೇಳಿದ್ದಾರೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) 322 ಸದಸ್ಯರ ಬಲಿಷ್ಠ ತಂಡವನ್ನು ಹೆಸರಿಸಿದೆ. ಈ ತುಕಡಿಯಲ್ಲಿ 215 ಕ್ರೀಡಾಪಟುಗಳು ಮತ್ತು 107 ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿ ಇದ್ದಾರೆ.

ಕ್ರೀಡಾಕೂಟವು ಜುಲೈ 28 ರಿಂದ ಆಗಸ್ಟ್ 8 ರವರೆಗೆ ಬ್ರಿಟಿಷ್ ನಗರದಲ್ಲಿ ನಡೆಯಲಿದೆ. ಗೋಲ್ಡ್ ಕೋಸ್ಟ್‌ನಲ್ಲಿ ನಡೆದ 2018 ರ ಕಾಮನ್‌ ವೆಲ್ತ್ ನಲ್ಲಿ ಭಾರತವು ಶಕ್ತಿಶಾಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನ ಹಿಂದೆ ಮೂರನೇ ಸ್ಥಾನ ಗಳಿಸಿತ್ತು.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!