74 ವರ್ಷಗಳ ನಂತರ ಕೋಲಾರದ ಗಡಿಯಾರ ಗೋಪುರ ಇಸ್ಲಾಮಿಕ್ ಗುರುತಿನ ಬದಲು ತ್ರಿವರ್ಣ ಹೊದ್ದ ಕತೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಸುಮಾರು 75 ವರ್ಷಗಳ ನಂತರ ಮೊದಲ ಬಾರಿಗೆ ಶನಿವಾರ ಕೋಲಾರದ ಗಡಿಯಾರ ಗೋಪುರದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ.

ವರದಿಗಳ ಪ್ರಕಾರ, ಕೋಲಾರದ ಪ್ರಸಿದ್ಧ ಗಡಿಯಾರ ಗೋಪುರದ ಮೇಲೆ ಏಳು ದಶಕಗಳಿಂದ ಹಸಿರು ಬಣ್ಣದಲ್ಲಿ ಹಾರಿಸಲಾಗಿದ್ದ ಇಸ್ಲಾಮಿಕ್ ಧ್ವಜವನ್ನು ಇಳಿಸಿ, ಈಗ ಭಾರತದ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. ಸ್ಥಳದಲ್ಲಿ ಕ್ಷಿಪ್ರ ಕಾರ್ಯಪಡೆಯ ನಿಯೋಜನೆ ಸೇರಿದಂತೆ ಕಾರ್ಯಕರ್ತರಿಗೆ ಪೊಲೀಸರು ಭದ್ರತೆ ಒದಗಿಸಿದ್ದು, ಗಡಿಯಾರ ಗೋಪುರಕ್ಕೆ ಬಿಳಿ ಬಣ್ಣ ಬಳಿಯಲಾಯಿತು.

ಶನಿವಾರ ಕೋಲಾರದ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜು ಅವರ ಉಸ್ತುವಾರಿಯಲ್ಲಿ ಜಿಲ್ಲಾಡಳಿತವು ಗಡಿಯಾರ ಕಂಬದ ಮೇಲೆ ಹಾರಿಸಲಾಗಿದ್ದ ಇಸ್ಲಾಮಿಕ್ ಧ್ವಜಗಳನ್ನು ತೆರವು ಮಾಡಿತು. ಇಸ್ಲಾಮಿಕ್ ಧ್ವಜಗಳನ್ನು ಜಿಲ್ಲಾಡಳಿತ ತೆಗೆದ ನಂತರ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಆದರೆ, ಶನಿವಾರ ಯಾವುದೇ ಅಹಿತಕರ ಘಟನೆಗಳು ಸಂಭವಿಸಲಿಲ್ಲ, ಏಕೆಂದರೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಂತರ ಕೋಲಾರ ಜಿಲ್ಲಾ ಪೊಲೀಸರು, ಹೊಸದಾಗಿ ಬಣ್ಣ ನೀಡಿ ಅಲಂಕೃತಗೊಂಡ ಗಡಿಯಾರ ಗೋಪುರದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಲು ಸ್ಥಳೀಯ ಮುಸ್ಲಿಮರು ಸೇರಿದಂತೆ ಸಾರ್ವಜನಿಕರನ್ನು ತೊಡಗಿಸಿಕೊಂಡರು.

ಘಟನೆಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಗಡಿಯಾರ ಗೋಪುರವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಕ್ಕಾಗಿ ಹಲವಾರು ಮಂದಿ ಜಿಲ್ಲೆಯ ಅಧಿಕಾರಿಗಳನ್ನು ಶ್ಲಾಘಿಸಿದ್ದಾರೆ.

ಪ್ರತಿಜ್ಞೆ ಮಾಡಿದ್ದರು ಸಂಸದರು

ಕೋಲಾರದ ಲೋಕಸಭಾ ಸಂಸದ ಮುನಿಸ್ವಾಮಿ ಎಸ್. ಅವರು ಈ ಹಿಂದೆ ಗಡಿಯಾರ ಗೋಪುರದ ಮೇಲೆ ಹಾರಿಸಲಾದ ಇಸ್ಲಾಮಿಕ್ ಧ್ವಜವನ್ನು ಬದಲಾಯಿಸುವುದಾಗಿ ಪ್ರತಿಜ್ಞೆ ಮಾಡಿದ್ದರು. ಅಲ್ಲದೆ ಅದೇ ಸ್ಥಳದಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು ಹಾರಿಸಲಾಗುವುದು ಎಂದು ಕೋಲಾರದ ಸಾರ್ವಜನಿಕರಿಗೆ ಭರವಸೆ ನೀಡಿದ್ದರು. ಗಡಿಯಾರ ಗೋಪುರದ ವಿವಾದದ ನಡುವೆಯೇ ಜಿಲ್ಲಾಧಿಕಾರಿಗಳು ಸೆಕ್ಷನ್ 144 ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಸಂಸದರು ನಗರದಲ್ಲಿ ಪ್ರತಿಭಟನೆ ನಡೆಸಿದ್ದರು. ಅಷ್ಟೇ ಅಲ್ಲ, ಸಂಸದ ಎಸ್.ಮುನಿಸ್ವಾಮಿ ಅವರು ತಮ್ಮನ್ನು ತಡೆಯುವಂತೆ ಅಧಿಕಾರಿಗಳಿಗೆ ಸವಾಲು ಹಾಕಿದ್ದು, ಗಡಿಯಾರ ಗೋಪುರ ಮೇಲೆ ತ್ರಿವರ್ಣ ಧ್ವಜ ಹಾರಿಸುವವರೆಗೂ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದರು.

74 ವರ್ಷಗಳ ನಂತರ ಕೋಲಾರದ ಗಡಿಯಾರ ಗೋಪುರದಲ್ಲಿ ನಿರ್ದಿಷ್ಟ ಸಮುದಾಯದ ಬಾವುಟವು ತೆರವಾಗಿ ಭಾರತೀಯ ತ್ರಿವರ್ಣ ಧ್ವಜಕ್ಕೆ ದಾರಿಯಾಗಿದೆ. ಮಾಡಿಕೊಟ್ಟಿದೆ ಎಂದು ಶನಿವಾರ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

ಕೋಲಾರ ಪಟ್ಟಣದ ಪ್ರಮುಖ ಹೆಗ್ಗುರುತಾಗಿರುವ ಈ ಗಡಿಯಾರ ಗೋಪುರವನ್ನು 1930ರಲ್ಲಿ ಮುಸ್ತಫಾ ಸಾಹೇಬ್ ಎಂಬ ವ್ಯಾಪಾರಿ ನಿರ್ಮಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!