Saturday, December 9, 2023

Latest Posts

SHOCKING| ಕೋಲ್ಕತ್ತಾ-ದೋಹಾ ವಿಮಾನಕ್ಕೆ ಬಾಂಬ್ ಬೆದರಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೋಲ್ಕತ್ತಾ-ದೋಹಾ ವಿಮಾನಕ್ಕೆ ಬಾಂಬ್ ಬೆದರಿಕೆ ಮಾಹಿತಿಯಿಂದಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ಶಾಕ್‌ ಆಗಿದ್ದಾರೆ. ಮಂಗಳವಾರ, ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕತಾರ್ ಏರ್ವೇಸ್ ಫ್ಲೈಟ್ ಕ್ಯೂಆರ್ 541 ದೋಹಾಗೆ ಹಾರಲು ತಯಾರಿ ನಡೆಸುತ್ತಿದ್ದಾಗ ಪ್ರಯಾಣಿಕರೊಬ್ಬರು ಬಾಂಬ್ ಇದೆ ಎಂದು ಆತಂಕ ಸೃಷ್ಟಿಸಿದರು. ಕೂಡಲೇ ವಿಮಾನದಲ್ಲಿದ್ದ ಒಟ್ಟು 186 ಜನರನ್ನು ಸ್ಥಳಾಂತರಿಸಲಾಯಿತು.

ಪ್ರಯಾಣಿಕರನ್ನು ಕೆಳಗಿಳಿಸಿ ಸ್ನಿಫರ್ ಡಾಗ್‌ಗಳೊಂದಿಗೆ ಬಾಂಬ್‌ಗಾಗಿ ಹುಡುಕಾಟ ನಡೆಸಲಾಯಿತು. ವಿಮಾನ ನಿಲ್ದಾಣದ ಸಿಬ್ಬಂದಿ ತ್ವರಿತವಾಗಿ ಕಾರ್ಯನಿರ್ವಹಿಸಿ ವಿಮಾನ ನಿಲ್ದಾಣದಲ್ಲಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಗೆ ಎಚ್ಚರಿಕೆ ನೀಡಿದರು.

ಆ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಆತನ ತಂದೆ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿದ್ದಾರೆ. ಬಳಿಕ ವಿಮಾನವನ್ನು ಪರಿಶೀಲಿಸಿದಾಗ ಬಾಂಬ್ ಇಲ್ಲದಿರುವುದು ಪತ್ತೆಯಾದ ಬಳಿಕ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಬಳಿಕ ಬೆಳಗ್ಗೆ 9 ಗಂಟೆಗೆ ವಿಮಾನ ದೋಹಾಕ್ಕೆ ಹೊರಟಿದೆ. ಬಾಂಬ್ ಬೆದರಿಕೆಯಿಂದಾಗಿ ವಿಮಾನ ಸಂಚಾರ ಕೊಂಚ ತಡವಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!