Friday, June 9, 2023

Latest Posts

ಕೋಲ್ಕತ್ತಾ ನೈಟ್ ರೈಡರ್ಸ್ ಗೆ ಸಿಕ್ಕಿತು ನೂತನ ಕ್ಯಾಪ್ಟನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡದಿಂದ ಈಗಾಗಲೇ ಶ್ರೇಯಸ್ ಅಯ್ಯರ್ (Shreyas Iyer)ಔಟ್ ಆಗಿದ್ದು, ಹೀಗಾಗಿ ತಂಡದ ಮ್ಯಾನೇಜ್‌ಮೆಂಟ್ ತಂಡದ ನೂತನ ನಾಯಕನಾಗಿ ಎಡಗೈ ಬ್ಯಾಟ್ಸ್‌ಮನ್ ನಿತೀಶ್ ರಾಣಾ (Nitish Rana) ಅವರನ್ನು ಆಯ್ಕೆ ಮಾಡಿದೆ.

ಈ ಬಗ್ಗೆ ತನ್ನ ಟ್ವಿಟರ್ ಖಾತೆಯಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಕೆಕೆಆರ್, ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಕೋಲ್ಕತ್ತಾ ತಂಡವನ್ನು ನಿತೀಶ್ ರಾಣಾ ಮುನ್ನಡೆಸಲಿದ್ದಾರೆ ಎಂದು ಬರೆದುಕೊಂಡಿದೆ.

ಇತ್ತೀಚೆಗೆ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಪಂದ್ಯದಲ್ಲಿ ಅಂದರೆ ಅಹಮದಾಬಾದ್ ಟೆಸ್ಟ್‌ನಲ್ಲಿ ಶ್ರೇಯಸ್ ಗಾಯದ ಕಾರಣದಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಆ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿಯೂ ಶ್ರೇಯಸ್ ಆಡಲಾಗಲಿಲ್ಲ. ಹೀಗಾಗಿ ಐಪಿಎಲ್‌ನಲ್ಲೂ ಶ್ರೇಯಸ್ ಆಡುವ ಬಗ್ಗೆ ಅನುಮಾನಗಳಿದ್ದವು. ಆದ್ದರಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮ್ಯಾನೇಜ್‌ಮೆಂಟ್ ನಾಯಕನನ್ನು ಆಯ್ಕೆ ಮಾಡಬೇಕಾದ ಒತ್ತಡಕ್ಕೆ ಸಿಲುಕಿತ್ತು.

ರಾಣಾಗೂ ಮೊದಲು ಕೆಕೆಆರ್ ತಂಡದ ನಾಯಕತ್ವ ಯಾರ ಹೆಗಲೆರಲಿದೆ ಎಂಬ ಪ್ರಶ್ನೆಗೆ ತುಂಬಾ ಹತ್ತಿರವಾಗಿದ್ದ ಉತ್ತರವೆಂದರೆ ಅದು ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಸುನೀಲ್ ನರೈನ್. 2012 ರಲ್ಲಿ ಫ್ರಾಂಚೈಸಿಗೆ ಸೇರಿದ ಸುನಿಲ್ ನರೈನ್ ಜೊತೆಗೆ ಹಂಗಾಮಿ ನಾಯಕತ್ವದ ರೇಸ್​ನಲ್ಲಿ ರಾಣಾ ಕೂಡ ಒಬ್ಬರಾಗಿದ್ದರು. ನರೈನ್, ಇತ್ತೀಚೆಗೆ ನಡೆದ ILT20 ಲೀಗ್‌ನಲ್ಲಿ ಅಬುಧಾಬಿ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದರು.

ಇನ್ನು ರಾಣಾ ದೇಶಿ ಟೂರ್ನಿಯಾದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 12 ಟಿ20 ಪಂದ್ಯಗಳಲ್ಲಿ ತನ್ನ ರಾಜ್ಯ ತಂಡ ದೆಹಲಿಯನ್ನು ಮುನ್ನಡೆಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!