ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಸಂಚಲನ ಮೂಡಿಸಿರುವ ಆರ್ ಜಿ ಕಾರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಟ್ರೈನಿ ವೈದ್ಯೆ ಹತ್ಯೆ ಪ್ರಕರಣದಲ್ಲಿ ಪೋಸ್ಟ್ ಪರ್ಟಂ ರಿಪೋರ್ಟ್ ಬಂದಿದ್ದು, ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.
ಟ್ರೈನಿ ವೈದ್ಯೆಯ ದೇಹದಲ್ಲಿ 150 ಮಿಲಿ ಗ್ರಾಂ ವೀರ್ಯ ಪತ್ತೆಯಾಗಿದೆ. ಹೀಗಾಗಿ ಇದು ಒಬ್ಬನಿಂದ ಆಗಿರುವ ಕೃತ್ಯ ಅಲ್ಲ. ಇದು ಸಾಮೂಹಿಕ ಅತ್ಯಾಚಾರ ಎಂದು ಸಂತ್ರಸ್ತೆಯ ಪೋಷಕರು ಕೂಡ ಶಂಕೆ ವ್ಯಕ್ತಪಡಿಸಿದ್ದಾರೆ.
ವರದಿ ನೀಡಿದ ಬಳಿಕ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ.ಸುಭರ್ಣಾ ಗೋಸ್ವಾಮಿ, ಟ್ರೈನಿ ವೈದ್ಯೆ ದೇಹದಲ್ಲಿ 151 ಗ್ರಾಂ ದ್ರವವಿದೆ. ಒಬ್ಬರೇ ಲೈಂಗಿಕ ದೌರ್ಜನ್ಯ ಎಸಗಿದರೆ ಆಕೆಯ ದೇಹದಲ್ಲಿ ಅಷ್ಟು ದ್ರವ ಇರುವುದಿಲ್ಲ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ಸ್ಪಷ್ಟವಾಗಿದೆ. ಈ ಕೊಲೆ ಘಟನೆಯಲ್ಲಿ ಹಲವರು ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಆಕೆಯ ಮೈಮೇಲೆ ಗಾಯಗಳಿವೆ. ಒಬ್ಬರೇ ಇದ್ದರೆ, ಆಕೆಯನ್ನು ಇಷ್ಟು ನೋಯಿಸುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?
ಟ್ರೈನಿ ವೈದ್ಯೆಯನ್ನು ಕತ್ತು ಹಿಸುಕಿ ಕೊಂದಿದ್ದಾರೆ. ಅದರಿಂದಾಗಿ ಆಕೆಯ ಥೈರಾಯ್ಡ್ ಭಾಗದ ಮೃದು ಸ್ಥಿತಿಯು ಮುರಿದುಹೋಗಿದೆ. ಆಕೆಯ ದೇಹದ ಖಾಸಗಿ ಭಾಗಗಳಲ್ಲಿ ಗಾಯಗಳಿವೆ. ತುಟಿ, ಬೆರಳುಗಳು ಮತ್ತು ಮೇಲಿನ ಎಡ ಕಾಲಿನ ಮೇಲೆ ಗಾಯಗಳು ಕಂಡುಬಂದಿವೆ. ಆಕೆಯ ಬಾಯಿ, ಕಣ್ಣಿನಿಂದ ರಕ್ತ ಬoದಿದೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಬಾಯಿ ಬಿಗಿದಿದ್ದರು. ಇದರಿಂದ ಉಸಿರು ಬಾರದ ಸ್ಥಿತಿಗೆ ತಲುಪಿದ್ದಾಳೆ. ಆಕೆಯ ತಲೆಯನ್ನು ಗೋಡೆಗೆ ಹೊಡೆದಿರುವುದು ಈ ವರದಿಯಲ್ಲಿ ಸ್ಪಷ್ಟವಾಗಿದೆ. ಮುಖದ ಮೇಲೂ ಗೀಚಿರುವುದು ಕಂಡುಬಂದಿದೆ. ಲೈಂಗಿಕ ದೌರ್ಜನ್ಯದ ಸಂದರ್ಭದಲ್ಲಿ ಆಕೆಗೆ ತೀವ್ರ ಚಿತ್ರಹಿಂಸೆ ನೀಡಲಾಗಿದೆ ಎಂದು ಪೋಸ್ಟ್‌ಮಾರ್ಟಂ ವರದಿಯು ಸ್ಪಷ್ಟಪಡಿಸಿದೆ.
ಆಗಸ್ಟ್ 9ರ ಶುಕ್ರವಾರದ ಮುಂಜಾನೆ ಆಸ್ಪತ್ರೆಯ ಸಿಬ್ಬಂದಿ ಸೆಮಿನಾರ್ ಹಾಲ್‌ನಲ್ಲಿ ಸ್ನಾತಕೋತ್ತರ ತರಬೇತಿ ವಿದ್ಯಾರ್ಥಿಯ ಶವ ಬೆತ್ತಲೆಯಾಗಿ ಬಿದ್ದಿರುವುದು ಕಂಡುಬಂದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಸಂಜಯ್ ರಾಯ್ ಎಂಬ ವ್ಯಕ್ತಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಮತ್ತೊಂದೆಡೆ ಘಟನೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇನ್ನೊಂದು ಕಡೆ ಪ್ರಕರಣವನ್ನು ಸಿಬಿಐಗೆ ವಹಿಸಿ ಕೋಲ್ಕತ್ತಾ ಹೈಕೋರ್ಟ್ ಆದೇಶಿಸಿದ್ದು, ಸಿಬಿಐ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.