ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತೆಲುಗುವಿನಲ್ಲಿ ಬಿಗ್‌ಬಾಸ್ ಮತ್ತೆ ಪ್ರಾರಂಭವಾಗುತ್ತಿದೆ. ಸ್ಟಾರ್ ಮಾ ಜನಪ್ರಿಯ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ ತೆಲುಗು ಸೀಸನ್ 8 ರ ಹೊಸ ಪ್ರೋಮೊವನ್ನು ಭಾನುವಾರ ಬಿಡುಗಡೆ ಮಾಡಿದೆ.
ಈಗಾಗಲೇ ಮೂರು ಪ್ರೋಮೋಗಳು ಬಿಡುಗಡೆಯಾಗಿದ್ದು, ಸೀಸನ್ 8ಕ್ಕೆ ಯಾರೆಲ್ಲ ಬರುತ್ತಾರೆ ಎಂಬ ಬಗ್ಗೆ ಕುತೂಹಲ ಕೂಡ ಹೆಚ್ಚಿದೆ. ಕನ್ನಡದವರು ಕೂಡ ಈ ಬಾರಿ ಇರಲಿದ್ದಾರೆ ಎಂದು ವರದಿಯಾಗಿದೆ.
ಸಂಭಾವ್ಯ ಅಭ್ಯರ್ಥಿಗಳ ಹೆಸರು ವೈರಲ್ ಆಗುತ್ತಿದೆ. ಅದರಂತೆ ಜ್ಯೋತಿಷ್ಯ ವೇಣುಸ್ವಾಮಿ, ಯೂಟ್ಯೂಬರ್ ಬರೆಲ್ಲಕ್ಕ, ಯೂಟ್ಯೂಬರ್ ಯಾದಂ ರಾಜು ರಿತು ಚೌಧರಿ, ಕಿರುತೆರೆ ತಾರೆಯರಾದ ಅಂಜಲಿ, ಯಶ್ಮಿ ಗೌಡ, ತೇಜಸ್ವಿನಿ ಗೌಡ, ಹಿರಿಯ ನಟಿ ಸನಾ, ನಟ ಅನಿಲ್ ಗೀಲಾ, ಹಾಸ್ಯನಟ ಬುಂಚಿಕ್ ಬಬ್ಲು, ಕಿರಾಕ್ ಆರ್‌ಪಿ, ರಿಂಗ್ ರಿಯಾಜ್, ನಿರೂಪಕಿ ವಿಂಧ್ಯಾ ವಿಶಾಖ, ಪಾಗಲ್ ಪವಿತ್ರಾ ಹೀಗೆ ಹಲವು ಜನರ ಹೆಸರಿದೆ. ಇದರ ಜೊತೆಗೆ ಸುದ್ದಿ ವಾಚಕಿ ಕಲ್ಯಾಣಿ, ನಟಿ ರೇಖಾ ಬೋಜ್, ಸಾವಯವ ಕೃಷಿ ತಜ್ಞ ನೇತ್ರಾ ರೆಡ್ಡಿ, ಧಾರಾವಾಹಿ ನಟ ಇಂದ್ರನೀಲ್ ಸೇನ್‌ಗುಪ್ತ, ನಟ ಅಬ್ಬಾಸ್, ನಟ ರೋಹಿತ್, ಗಾಯಕ ಸಾಕೇತ್ ಕೊಮಂದೂರಿ, ಫೆಮಿನಾ ಮಿಸ್ ಇಂಡಿಯಾ ತೆಲಂಗಾಣ 2023 ರ ಊರ್ಮಿಳಾ ಚೌಹಾಣ್ ಅವರ ಹೆಸರು ಕೂಡ ಇದೆ.
ಇದರಲ್ಲಿ ಯಶ್ಮಿ ಗೌಡ ಕನ್ನಡದಾಕೆ, ಇದರ ಜೊತೆಗೆ ತೇಜಸ್ವಿನಿ ಗೌಡ ಕೂಡ ಕನ್ನಡದವರೇ ಆಗಿದ್ದಾರೆ. ಮೂಲತಃ ಕನ್ನಡದವರಾದ ಇವರು ತೆಲುಗಿನ ಧಾರವಾಹಿಗಳಲ್ಲಿ ಫೇಮಸ್ ಆಗಿದ್ದಾರೆ.