ಕೊಪ್ಪಳ: ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದ ಮಿನಿ ಡ್ಯಾಂನಿಂದ ಬಿಟ್ಟ ಹೆಚ್ಚುವರಿ ನೀರು

ಹೊಸದಿಗಂತ ವರದಿ, ಕೊಪ್ಪಳ:
ತಾಲೂಕಿನ ಕಿನ್ನಾಳ ಮಿನಿ ಡ್ಯಾಂನಿಂದ ನೀರು ಹಳ್ಳದ ಪಾತ್ರಕ್ಕೆ ಹರಿಬಿಟ್ಟ ಹಿನ್ನೆಲೆಯಲ್ಲಿ ತಾಲೂಕಿನ ಹಳೇ ಗೊಂಡಬಾಳದ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು ಹಳ್ಳ ಕೊಳ್ಳಗಳು ಭರ್ತಿಯಾಗಿ ಹರಿಯುತ್ತಿವೆ.
ತಾಲೂಕಿನ ಕಿನ್ನಾಳ ಡ್ಯಾಂನಿಂದ ಹೆಚ್ಚುವರಿ ನೀರು ಹರಿ ಬಿಟ್ಟ ಹಿನ್ನೆಲೆಯಲ್ಲಿ ತಾಲೂಕಿನ ಹಳೇ ಗೊಂಡಬಾಳ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿದೆ. ರೈತರು ಜಾನುವಾರುಗಳಿಗೆ ಸಂಗ್ರಹಿಸಿಟ್ಡಿದ್ದ ಮೇವಿನ ಬಣವೆ ನೀರಿನಲ್ಲಿ ಜಲಾವೃತವಾಗಿವೆ. ನೀರಿಗೆ ಮೇವು ನೆನೆದಿದೆ. ಅಂಗನವಾಡಿ ಕಟ್ಟಡವೂ ನೀರಿನಲ್ಲಿ ಜಲಾವೃತವಾಗಿದೆ. ಜಿಲ್ಲಾಡಳಿತ ಕೂಡಲೇ ನಮ್ಮ ಸಮಸ್ಯೆ ಗಮನಿಸಲಿ, ಜನ ಜಾನುವಾರುಗಳ ರಕ್ಷಣೆಗೆ ಮುಂದಾಗಲಿ ಎಂದು ಹಳೇ ಗೊಂಡಬಾಳ ಗ್ರಾಮದ ಜನತೆ ಒತ್ತಾಯ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!