Sunday, June 26, 2022

Latest Posts

ಸರಳ, ಸುಂದರವಾಗಿ ನಡೆದ ಕೊಪ್ಪಳ ಗವಿಸಿದ್ದೇಶ್ವರ ರಥೋತ್ಸವ

ದಿಗಂತ ವರದಿ ಕೊಪ್ಪಳ:

ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಕೊಪ್ಪಳ ಗವಿಸಿದ್ದೇಶ್ವರ ರಥೋತ್ಸವ ಬುಧವಾರ ಬೆಳಗ್ಗೆ 4.30ಕ್ಕೆ ಬ್ರಾಹ್ಮಿ ಮೂಹರ್ತದಲ್ಲಿ ನಡೆದಿದೆ.
ಇಂದು ಸಂಜೆ 5.30ಕ್ಕೆ ರಥೋತ್ಸವ ನಡೆಯಬೇಕಿತ್ತು. ಆದರೆ, ಸಂಜೆ ಜಾತ್ರೆ ನಡೆದರೆ ಲಕ್ಷಾಂತರ ಜನರು ಸೇರುವ ಸಾಧ್ಯತೆ ಇರುವುದರಿಂದ ಇಂದು ಬೆಳಿಗ್ಗೆ 4.30ಕ್ಕೆ ಜಾತ್ರೆ ನಡೆದಿದೆ. ಕೊಪ್ಪಳದ‌ ಗವಿಸಿದ್ದೇಶ್ವರ ರಥೋತ್ಸವ ಅತ್ಯಂತ‌ ಸರಳವಾಗಿ ನಡೆದಿದೆ.
ಪ್ರತಿ ವರ್ಷ ನಡೆಯುವ ಗವಿಸಿದ್ದೇಶ್ವರ ರಥೋತ್ಸವದಂದು ಸುಮಾರು 5 ಲಕ್ಷ ಜನರು ಸೇರುತ್ತಿದ್ದರು. ಜಿಲ್ಲಾಡಳಿತ ನಿರ್ಬಂಧದ ಹಿನ್ನೆಲೆಯಲ್ಲಿ ಜಾತ್ರೆಯ ಎಲ್ಲ ಕಾರ್ಯಕ್ರಮಗಳನ್ನ ಗವಿಮಠ ರದ್ದು ಮಾಡಿತ್ತು. ಸಾಂಪ್ರದಾಯಿಕ ಮತ್ತು ಧಾರ್ಮಿಕ ಕಾರ್ಯಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss