ಮನರಂಜನಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ನೋಟ್‌ಬ್ಯಾನ್ ಬಗ್ಗೆ ತಮಾಷೆ: ಖಾಸಗಿ ವಾಹಿನಿಗೆ ಕೇಂದ್ರದಿಂದ ನೋಟಿಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಕ್ಕಳ ಶೋ ಒಂದರಲ್ಲಿ ನೋಟ್ ಬ್ಯಾನ್ ಮತ್ತು ಡಿಮಾನಟೈಸೇಷನ್ ಬಗ್ಗೆ ತಮಾಷೆ ಮಾಡಿದ್ದು, ಖಾಸಗಿ ವಾಹಿನಿಗೆ ಕೇಂದ್ರ ನೊಟೀಸ್ ನೀಡಿದೆ.
ಜೂನಿಯರ್ ಸೂಪರ್ ಸ್ಟಾರ್ ಸೀಸನ್-4 ಕಾರ್ಯಕ್ರಮದಲ್ಲಿ ನೋಟ್ ಬ್ಯಾನ್ ಬಗ್ಗೆ ಸ್ಕಿಟ್ ಮಾಡಲಾಗಿತ್ತು. ಈ ವೇಳೆ ಕಪ್ಪು ಹಣ ನಿರ್ಮೂಲನೆಗೆ ರಾಜ ನೋಟ್ ಬ್ಯಾನ್ ಮಾಡುತ್ತಾನೆ. ಆದರೂ ಕಪ್ಪು ಹಣ ತೊಲಗೋದಿಲ್ಲ ಎಂದು ತಮಾಷೆಯಾಗಿ ಹೇಳಲಾಗಿತ್ತು.
ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ಮಾಹಿತಿ ಮತ್ತು ಪ್ರಸಾರ ಸಚಿವಾಯಲಕ್ಕೆ ದೂರು ನೀಡಿದೆ.
ಈ ಸಂಬಂಧ ಖಾಸಗಿ ವಾಹಿನಿಗೆ ನೊಟೀಸ್ ಜಾರಿಯಾಗಿದ್ದು, ವಾರದೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ.
ತಮಿಳಿನ ಈ ಶೋನಲ್ಲಿ ನೋಟ್‌ಬ್ಯಾನ್ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ. ಈ ಜೋಕ್‌ಗೆ ಜಡ್ಜ್‌ಗಳು ನಕ್ಕಿದ್ದಾರೆ. ಇದನ್ನು ತಮಿಳುನಾಡು ಬಿಜೆಪಿ ಐಟಿ ಮತ್ತು ಸೋಶಿಯಲ್ ಮೀಡಿಯಾ ಘಟಕ ವಿರೋಧಿಸಿದೆ. ಘಟಕದ ಸಿಟಿಆರ್ ನಿರ್ಮಲ್ ಕುಮಾರ್ ದೂರು ನೀಡಿದ್ದಾರೆ.
ಈ ಬಗ್ಗೆ ಕಾರ್ಯಕ್ರಮದ ಜಡ್ಜ್‌ಗಳು ಮಾತನಾಡಿದ್ದು, ಅಲ್ಲಿ ನಡೆದಿದ್ದೇ ಬೇರೆ, ನಾವು ಆ ಜೋಕ್‌ಗೆ ನಕ್ಕಿಲ್ಲ. ಫೈನಲ್ ಎಡಿಟ್ ನೋಡಿ ನಮಗೂ ಆಶ್ಚರ್ಯವಾಗಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!