ಹೊಸದಿಗಂತ ವರದಿ, ಕೊಪ್ಪಳ:
ನಗರದ ಹೆಗ್ಗುರುತು ಅಶೋಕ ಸರ್ಕಲ್ ನ ವೀರಸ್ತಂಭಕ್ಕೆ ಮಂಗಳವಾರ ರಾತ್ರಿ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ.
ಸಿಮೆಂಟ್ ಮಿಕ್ಸಿಂಗ್ ಹೊತ್ತೊಯ್ಯುವ ಲಾರಿ ಡಿಕ್ಕಿ ಹೊಡೆದು ನಿಂತಿದೆ. ನಗರದ ಇತಿಹಾಸದ ಬಗ್ಗೆ, ಅಶೋಕ ಸರ್ಕಲ್ ನ ಮಹತ್ವದ ಬಗ್ಗೆ ಕೊಪ್ಪಳದ ನಗರಸಭೆ, ಜನಪ್ರತಿನಿಧಿಗಳಿಗೆ ಎಲ್ಲರಿಗೂ ಎಚ್ಚರಿಸಿ ಸಾಕಾಗಿ ಹೋಗುವಂತಾಗಿದೆ. ಪದೇ ಪದೇ ವೀರಸ್ತಂಭದ ಮೇಲೆ ವಾಹನಗಳು ಡಿಕ್ಕಿ ಹೊಡೆಯುವಂತಾಗಿದೆ. ಇಷ್ಟದರೂ ಯಾವುದೇ ಕ್ರಮವಹಿಸಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ