ಕೊರಿಯಾ ಓಪನ್: ಭಾರತದ ಲಕ್ಷ್ಯ ಸೇನ್ ಗೆಲುವಿನ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್

ದಕ್ಷಿಣ ಕೊರಿಯಾ: ಇಲ್ಲಿನ ಪಾಲ್ಮಾ ಸ್ಟೇಡಿಯಂನಲ್ಲಿ 1.02 ತಾಸು ಕಾಲ ನಡೆದ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ಪಂದ್ಯದ ಮೊದಲ ಸುತ್ತಿನಲ್ಲಿ ಭಾರತದ ಲಕ್ಷ್ಯ ಸೇನ್ ದಕ್ಷಿಣ ಕೊರಿಯಾದ ಚೋಯ್ ಜಿ ಹೂನ್ ಅವರನ್ನು 14-21, 21-16, 21-18 ಸೆಟ್‌ನಿಂದ ಸೋಲಿಸಿದ್ದಾರೆ.

ಮೊದಲ ಆಟದಲ್ಲಿ ವಿಶ್ವದ ನಂ. 9 ಭಾರತೀಯ ಆಟಗಾರ ಸೇನ್ ಅವರು 14-21 ಅಂಕಗಳಲ್ಲಿ ವಿಶ್ವ ನಂ. 498 ಆಟಗಾರನಿಂದ ಸೋಲುವಂತಾಯಿತು. ಇಬ್ಬರೂ ಆಟಗಾರರು 14-14 ಅಂಕಗಳಲ್ಲಿ ಸಮಬಲಗೊಂಡಾಗ, ಕೊರಿಯಾದ ಷಟ್ಲರ್ ಭಾರತದ ಸೇನ್ ವಿರುದ್ಧ ಸತತ ಏಳು ಅಂಕಗಳನ್ನು ಗಳಿಸಿದರು.

ಎರಡನೇ ಆಟದಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ಷಟ್ಲರ್ ಸೇನ್ 21-16 ರಿಂದ ಗೆದ್ದು, ಆಟದಲ್ಲಿ ಇಬ್ಬರೂ ಸಮಬಲ ಸಾಧಿಸಿದರು. ಆಟದಲ್ಲಿ ಇಬ್ಬರೂ ಆಟಗಾರರು 6-6ರಲ್ಲಿ ಸಮಬಲಗೊಂಡರು. ನಂತರ ಸೇನ್ ಸತತ ನಾಲ್ಕು ಅಂಕಗಳನ್ನು ಪಡೆದು ಮುನ್ನಡೆ ಸಾಧಿಸಿದರು ಮತ್ತು ಅಂತಿಮವಾಗಿ ಆಟವನ್ನು ಗೆದ್ದರು.

ಮೂರನೇ ಹಾಗೂ ಅಂತಿಮ ಆಟದಲ್ಲಿ ಆರಂಭದಲ್ಲಿ ಕೊರಿಯಾದ ಷಟ್ಲರ್ ಚೋಯ್ 9-5 ಅಂಕಗಳಿಂದ ಮುನ್ನಡೆ ಸಾಧಿಸಿದರು. ಆದರೆ ಸೇನ್ ಟ್ರೋಟ್‌ನಲ್ಲಿ 5 ಅಂಕಗಳನ್ನು ಗಳಿಸಿ 10-9 ಮುನ್ನಡೆ ಪಡೆದರು. ನಿಕಟ ಪೈಪೋಟಿಯ ಆಟದಲ್ಲಿ, ಇಬ್ಬರೂ ಆಟಗಾರರು 18-18 ರಲ್ಲಿ ಸಮಬಲಗೊಂಡರು. ನಂತರ ಲಕ್ಷ್ಯ ಸೇನ್ ಸತತ ಮೂರು ಅಂಕಗಳನ್ನು ಗೆದ್ದು ಅಂತಿಮ ಆಟವನ್ನು 21-18 ಅಂಕಗಳಿಂದ ವಿಜಯ ಸಾಧಿಸಿದರು.

ಡಬಲ್ಸ್‌ನಲ್ಲಿ ಭಾರತಕ್ಕೆ ಸೋಲು

ಪುರುಷರ ಡಬಲ್ಸ್‌ನಲ್ಲಿ ಭಾರತದ ಶಟ್ಲರ್‌ಗಳಾದ ಕೃಷ್ಣ ಪ್ರಸಾದ್ ಗರಗ ಮತ್ತು ವಿಷ್ಣುವರ್ಧನ್ ಗೌಡ್ ಪಂಜಾಲ ಅವರು ಇಂಡೋನೇಷ್ಯಾದ ಪ್ರಮುದ್ಯ ಕುಸುಮವರ್ಧನ ಮತ್ತು ಯೆರೆಮಿಯಾ ಎರಿಚ್ ಯೋಚೆ ಯಾಕೋಬ್ ರಂಬಿಟನ್ ವಿರುದ್ಧ 14-21, 19-21 ಅಂತರದಲ್ಲಿ ಸೋತರು.

ಪುರುಷರ ಡಬಲ್ಸ್ ವಿಭಾಗದ ಮತ್ತೊಂದು ಪಂದ್ಯದಲ್ಲಿ ಭಾರತದ ನವನೀತ್ ಬೊಕ್ಕಾ ಮತ್ತು ಬಿ.ಸುಮೀತ್ ರೆಡ್ಡಿ ಜೋಡಿ ಮಲೇಷ್ಯಾದ ಯೂ ಸಿನ್ ಒಂಗ್ ಮತ್ತು ಈ ಯಿ ಟಿಯೊ ಜೋಡಿ ವಿರುದ್ಧ 14-21, 12-21 ಸೆಟ್‌ಗಳಿಂದ ಸೋತರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!