15 ದಿನಗಳಲ್ಲಿ 13ನೇ ಸಲ ಪೆಟ್ರೋಲ್-ಡೀಸೆಲ್ ದರ ಹೆಚ್ಚಳ

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಹದಿನೈದು ದಿನಗಳಲ್ಲಿ ಇಂಧನ ಬೆಲೆಯಲ್ಲಿ 13ನೇ ಸಲ ದರ ಪರಿಷ್ಕರಣೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಮಂಗಳವಾರ ತಲಾ 80 ಪೈಸೆ ಹೆಚ್ಚಳವಾಗಿದೆ. ಇದರೊಂದಿಗೆ ಇಂಧನ ದರದಲ್ಲಿ ಎರಡು ವಾರದಲ್ಲಿ ಒಟ್ಟು 9.20 ರೂ. ಜಾಸ್ತಿಯಾಗಿದೆ.

ಪೆಟ್ರೋಲ್-ಡೀಸೆಲ್ ದರ ಎಲ್ಲೆಲ್ಲಿ ಎಷ್ಟಿದೆ?

ದಿಲ್ಲಿಯಲ್ಲಿ ಈಗ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ಕ್ರಮವಾಗಿ 104.62 ಮತ್ತು 95.87 ರೂ., ಮುಂಬೈನಲ್ಲಿ ಪೆಟ್ರೋಲ್ ಬೆಲೆ 84 ಪೈಸೆ ಹೆಚ್ಚಳದ ನಂತರ ಲೀಟರ್‌ಗೆ 119.67 ರೂ. ಮತ್ತು ಡೀಸೆಲ್ ಬೆಲೆ 103.92 ರೂ. ಆಗಿದ್ದು 85 ಪೈಸೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ 110.25 ರೂ. ಆಗಿದ್ದು, 84 ಪೈಸೆ ಏರಿಕೆಯಾಗಿದೆ. ಡೀಸೆಲ್ ದರದಲ್ಲಿ 78 ಪೈಸೆ ಜಾಸ್ತಿಯಾಗಿ 94.01 ರೂ. ಆಗಿದೆ. ಉಡುಪಿಯಲ್ಲಿ ಇಂದು ಪೆಟ್ರೋಲ್ ದರ 109.75 ರೂ. ಇದ್ದು, 84 ಪೈಸೆ ಏರಿಕೆಯಾಗಿದೆ. 79 ಪೈಸೆ ಹೆಚ್ಚಳದೊಂದಿಗೆ ಡೀಸೆಲ್ ದರ 93.53 ರೂ. ಆಗಿದೆ.

ಪ್ರತಿಪಕ್ಷಗಳು ಇಂಧನ ಬೆಲೆ ಇಳಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ರಾಜಕೀಯ ಸಂಚಲನ ಮೂಡಿಸಿದೆ. ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಪದೇ ಪದೇ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯಸಭೆಯನ್ನು ದಿನಕ್ಕೆ ಮುಂದೂಡಲಾಯಿತು. ಈ ವಿಷಯದ ಬಗ್ಗೆ ಚರ್ಚೆ ನಡೆಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ತಿರಸ್ಕರಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!