ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರ್ತಿಕ ಮಾಸದಲ್ಲಿ ಬೆಳಗುವ ಪ್ರತಿಯೊಂದು ದೀಪವನ್ನು ಮಂಗಳಪ್ರದ ಎಂದು ಕರೆಯಲಾಗುತ್ತದೆ. ಪ್ರತಿವರ್ಷದಂತೆ ಈ ವರ್ಷವೂ ಹೈದರಾಬಾದ್‌ನಲ್ಲಿ ಕೋಟಿ ದೀಪೋತ್ಸವ ಆಚರಣೆ ಯಶಸ್ವಿಯಾಗಿ ನಡೆಯುತ್ತಿದ್ದು, ಎನ್‌ಟಿಆರ್ ಕ್ರೀಡಾಂಗಣದಲ್ಲಿ ಕೈಲಾಸವೇ ಧರೆಗಿಳಿದಂತೆ ಭಾಸವಾಗುತ್ತಿದೆ. ನಾಲ್ಕು ದಿನಗಳಿಂದ ಅದ್ದೂರಿಯಾಗಿ ನಡೆಯುತ್ತಿರುವ ದೀಪೋತ್ಸವ ಐದನೇ ದಿನಕ್ಕೆ ಕಾಲಿಟ್ಟಿದೆ.
ಕೋಟಿ ದೀಪ ಯಜ್ಞದ ಐದನೇ ದಿನದ ವಿವೇಶ ಕಾರ್ಯಕ್ರಮಗಳು
- ಭಕ್ತರಿಂದ ಭಗವಾನ್ ನರಸಿಂಹ ಸ್ವಾಮಿ ಮೂರ್ತಿಗೆ ರಕ್ಷಾ ಕಂಕಣ ಪೂಜೆ
- ಸಿಂಹಾಚಲಂ ವರಾಹಲಕ್ಷ್ಮೀ ನೃಸಿಂಹ ಕಲ್ಯಾಣಂ
- ಶೇಷವಾಹನ ಮೇಲೆ ಸಿಂಹಾದ್ರಿಯಪ್ಪಣ್ಣನವರ ದರ್ಶನಭಾಗ್ಯ
- ಕೋಟಿ ದೀಪಗಳು ಬೆಳಗುವಿಕೆ
- ಸಪ್ತಹರಿತಗಳ ದೀಪಗಳು
- ಸುವರ್ಣ ಲಿಂಗೋದ್ಭವ ಮಹಿಮೆ
- ಮಹಾದೇವನಿಗೆ ಮಹಾನೀರಾಜನ
ಇಂತಹ ಹಲವು ವಿಶೇಷ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಣಿಗೆ ಹಬ್ಬವಾಗಲಿವೆ. ಹೈದರಾಬಾದ್‌ನ ಎನ್‌ಟಿಆರ್ ಕ್ರೀಡಾಂಗಣದಲ್ಲಿ ಸಂಜೆ 5.30ಕ್ಕೆ ದೀಪಾಯನ ಆರಂಭವಾಗಲಿದೆ. ಅದೇ ರೀತಿ ನಗರದ ಹೊರವಲಯದಿಂದ ಎನ್‌ಟಿಆರ್ ಕ್ರೀಡಾಂಗಣಕ್ಕೆ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ TSRTC ವಿಶೇಷ ಬಸ್‌ಗಳನ್ನು ಓಡಿಸುತ್ತಿದೆ.