ಕೋವಿಡ್ ಫ್ಯಾಕ್ಟರಿ ಚೀನಾದಿಂದ ಬಂದಿದೆ ಮತ್ತೊಂದು ಶಾಕಿಂಗ್ ನ್ಯೂಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಶ್ವಕ್ಕೆ ಕೊರೋನಾ ವೈರಸ್ ಅನ್ನು ನೀಡಿದ್ದ ಚೀನಾದಲ್ಲಿ ಇದೀಗ ಮತ್ತೊಂದು ಸೋಂಕು ಹುಟ್ಟಿಕೊಂಡಿದ್ದು, ಹಕ್ಕಿ ಜ್ವರ H3N8 ಸ್ಟ್ರೈನ್‌ನೊಂದಿಗೆ ಚೀನಾ ಮೊದಲ ಮಾನವ ಸೋಂಕನ್ನು ದಾಖಲಿಸಿದೆ ಎಂದು ದೇಶದ ಆರೋಗ್ಯ ಪ್ರಾಧಿಕಾರ ತಿಳಿಸಿದೆ.
ಮಧ್ಯ ಹೆನಾನ್ ಪ್ರಾಂತ್ಯದ ನಾಲ್ಕು ವರ್ಷದ ಬಾಲಕನಲ್ಲಿ ಹಕ್ಕಿ ಜ್ವರ H3N8 ಕಾಣಿಸಿಕೊಂಡಿದೆ.
ಏಪ್ರಿಲ್ 5 ರಂದು ಜ್ವರ ಮತ್ತು ಇತರ ರೋಗಲಕ್ಷಣಗಳನ್ನು ಕಂಡುಬಂದಬಂದು ರೂಪಾಂತರದ ಸೋಂಕಿಗೆ ಒಳಗಾಗಿದ್ದಾನೆ. ಆದರೆ ಯಾವುದೇ ನಿಕಟ ಸಂಪರ್ಕದಿಂದ ಸೋಂಕು ಬಂದಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.
ಆತ ತನ್ನ ಮನೆಯಲ್ಲಿ ಬೆಳೆಸಿದ ಕೋಳಿ ಮತ್ತು ಕಾಗೆಗಳೊಂದಿಗೆ ಸಂಪರ್ಕ ಹೊಂದಿದ್ದನು ಈ ಹಿನ್ನೆಲೆ ಈ ಸೋಂಕು ಬಂದಿರಬಹುದು ಎನ್ನಲಾಗುತ್ತಿದೆ.
ಹೆಚ್ಚಾಗಿ H3N8 ರೂಪಾಂತರವು ಕುದುರೆಗಳು, ನಾಯಿಗಳು, ಪಕ್ಷಿಗಳಲ್ಲಿ ಪತ್ತೆಯಾಗಿದೆ. ಆದರೆ H3N8 ನ ಯಾವುದೇ ಮಾನವ ಪ್ರಕರಣಗಳು ವರದಿಯಾಗಿಲ್ಲ ಎಂದು NHC ಹೇಳಿದೆ.
ಇದೀಗ ಮನವಿಗೂ ತಗುಲಿದ್ದು, ಆದರೆ ಆರಂಭಿಕ ಮೌಲ್ಯಮಾಪನವು ಮಾನವರಿಗೆ ಪರಿಣಾಮಕಾರಿಯಾಗಿ ಸೋಂಕು ತಗುಲಿಸುವ ಸಾಮರ್ಥ್ಯವನ್ನು ಇನ್ನೂ ಹೊಂದಿಲ್ಲ ಎಂದು ಆಯೋಗ ಹೇಳಿದೆ.
ಕಳೆದ ವರ್ಷ ಚೀನಾ H10N3 ನ ಮೊದಲ ಮಾನವ ಪ್ರಕರಣವನ್ನು ವರದಿ ಮಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!