ಪಿಎಸ್ಐ ಅಕ್ರಮ ಪ್ರಕರಣ: ದಿವ್ಯಾ ಹಾಗರಗಿ ಸಹಿತ ಆರು ಆರೋಪಿಗಳಿಗೆ ಅರೆಸ್ಟ್ ವಾರೆಂಟ್ ಜಾರಿ

ಹೊಸದಿಗಂತ ವರದಿ, ಕಲಬುರಗಿ:

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಸಿಐಡಿಯಿಂದ ತೆಲೆ ಮರೆಸಿಕೊಂಡಿರುವ ದಿವ್ಯಾ ಹಾಗರಗಿ ಸೇರಿ ಆರು ಜನರಿಗೆ ಕಂಟಕ ಎದುರಾಗಿದ್ದು, ಮುಂಬೈ ಬ್ಲಾಸ್ಟ್ ಪ್ರಕಾರದಲ್ಲಿ ದಾವುದ್ ಇಬ್ರಾಹಿಂಗೆ ನೀಡಲಾಗಿದ್ದ ಅರೆಸ್ಟ್ ವಾರೆಂಟ್ ಮಾದರಿಯಲ್ಲಿಯೇ, ಈ ಆರು ಜನ ಆರೋಪಿಗಳಿಗೆ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.

ಕರ್ನಾಟಕದ ಅಪರಾಧ ಪ್ರಕರಣಗಳಲ್ಲಿ ಇಂತಹ ಅರೆಸ್ಟ್ ವಾರೆಂಟ್ ಜಾರಿ ಆಗುವದು ಬಲು ಅಪರೂಪ.. ತನಿಖಾ ಹಂತದಲ್ಲಿ ಜಾರಿ ಮಾಡಲಾಗುವ ವಾರೇಂಟ್ ಅನ್ವಯ, ಆರೋಪಿಗಳು ಎಲ್ಲಿದ್ದರು ಬಂದು ಶರಣಾಗಲೇಬೇಕು. ಇಲ್ಲದಿದ್ದರೆ, ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಇರುತ್ತದೆ.

ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದ ಮಾಸ್ಟರ್ ಮೈಂಡ್ ದಿವ್ಯಾ ಹಾಗರಗಿ, ಮಂಜುನಾಥ್ ಮೇಳಕುಂದಿ, ರವೀಂದ್ರ ಮೇಳಕುಂದಿ, ಅರ್ಚನಾ, ಕಾಶಿನಾಥ್, ಶಾಂತಿಬಾಯಿಗೆ ಕಲಬುರಗಿ,ಯ 3 ನೇ ಜೆಎಮ್ಎಫ್ಸಿ ನ್ಯಾಯಾಲಯ ಇಂತಹದೊಂದು ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.

ಮುಂಬೈ ಬ್ಲಾಸ್ಟ್ ಪ್ರಕರಣದಲ್ಲಿ ದಾವುದ್ ಇಬ್ರಾಹಿಂ ಗೆ ನೀಡಲಾಗಿದ್ದ ಅರೇಸ್ಟ್ ವಾರೇಂಟ್ ಉಲ್ಲೇಖಿಸಿ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಕೋರಿಕೆ‌ ಸಲ್ಲಿಸಿದ್ದರು.‌

ಸಿಐಡಿ ಕೋರಿಕೆಯಂತೆ ತನಿಖಾ ಹಂತದ ಅರೇಸ್ಟ್ ವಾರೆಂಟ್ ಜಾರಿ ಮಾಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ಒಂದು ವಾರದೊಳಗೆ ಆರೋಪಿಗಳು ಸರೆಂಡರ್‌ ಆಗದಿದ್ದರೆ, ಉದ್ಘೋಷಿತ ಅಪರಾಧಿ ಎಂದು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳವ ಎಲ್ಲಾ ಸಾಧ್ಯತೆ ಇದೆ.

ಕಳೆದ 15 ದಿನಗಳಿಂದ ದಿವ್ಯಾ ಹಾಗರಗಿ ಸೇರಿ ಆರು ಜನ ಆರೋಪಿಗಳು ಸಿಐಡಿಯಿಂದ ತೆಲೆ ಮರೆಸಿಕೊಂಡಿದ್ದಾರೆ.. ಸಾಕಷ್ಟು ಶೋಧ ಮಾಡಿದರು, ಸುಳಿವು ಸಿಗದ ಹಿನ್ನಲೆ ಇಂತಹ ಕಠಿಣ ಮಾರ್ಗಕ್ಕೆ ಸಿಐಡಿ ಇಳಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!