ಕೆಪಿಟಿಸಿಎಲ್ ಪರೀಕ್ಷೆ ಬರೆದ ಅಭ್ಯರ್ಥಿಗಳು ಭಯಪಡಬೇಡಿ: ಸಚಿವ ಸುನೀಲ್ ಕುಮಾರ್

ಹೊಸದಿಗಂತ ವರದಿ, ಕಲಬುರಗಿ

ಕೆಪಿಟಿಸಿಎಲ್ ಪರೀಕ್ಷೆ ಬರೆದಂತಹ ಅಭ್ಯರ್ಥಿ ಗಳು ಯಾವುದೇ ಕಾರಣಕ್ಕೂ ಭಯಪಡುವ ಅವಶ್ಯಕತೆ ಇಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಭರವಸೆ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಟಿಸಿಎಲ್ ನೇಮಕಾತಿಯಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.

ನೇಮಕಾತಿ ನಮ್ಮ ಇಲಾಖೆಯಾದರೂ, ಪರೀಕ್ಷೆ ನಡೆಸಿದ್ದು ಕೆ.ಇ.ಎ ಆಗಿದೆ. ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ? ಎನೋ ವ್ಯತ್ಯಾಸ ಆಗಿದೆ ಎಂದರೆ ಯಾವುದೇ ಕಾರಣಕ್ಕೂ ಇದನ್ನು ನಾವು ಸಹಿಸಿಕೊಳ್ಳುವುದಿಲ್ಲ ಎಂದರು.

ಮೊದಲ ಹಂತದ ವರದಿಯಲ್ಲಿ ಆತರಹ ಎನೂ ಆಗಿಲ್ಲ ಎಂದು ಜಿಲ್ಲಾಧಿಕಾರಿಗಳು ನಮಗೆ ಹೇಳಿದ್ದಾರೆ. ಅದಾಗ್ಯೂ ಆ ಥರಹ ಘಟನಾವಳಿಗಳು ಎನಾದರೂ ನಡೆದಿದ್ದರೆ, ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.

ಪರೀಕ್ಷೆ ಬರೆದ ಅಭ್ಯರ್ಥಿ ಗಳು ಭಯಪಡು ಅಗತ್ಯ ಇಲ್ಲ. ಅಭ್ಯರ್ಥಿ ಗಳಿಗೆ ಸೂಕ್ತವಾದಂತಹ ನ್ಯಾಯ ಕೊಡಲಾಗುವುದು ಎಂದರು.

ವಿನಾಯಕ ದಾಮೋದರ ಸಾವಕ೯ರ್ ಅವರನ್ನು ಅನಗತ್ಯವಾಗಿ ಎಳೆದು ತಂದಿದ್ದು ಯಾರು ?. ಸಾವಕ೯ರ್ ಅಣ್ಣ ತಮ್ಮ ಇಬ್ಬರೂ ಸಹ ಅಂಡಮಾನಿನ ಸೆಲ್ಯೂಲರ್ ಜೈಲಿನಲ್ಲಿ ಇದ್ದಂಗೆ, ಈ ದೇಶದಲ್ಲಿ ಯಾರಾದರೂ ಇವರ ತರಹ ಹೋರಾಟಗಾರರು ಇದ್ದಾರೆಯೇ ? ಎಂದು ವಿರೋಧ ಮಾಡುವವರಿಗೆ ಪ್ರಶ್ನೆ ಮಾಡಿದರು.

ಸ್ವಾತಂತ್ರ್ಯ ಪೂವ೯ದ ಕಾಂಗ್ರೆಸ್ ಬೇರೆ. ಸ್ವಾತಂತ್ರ್ಯ ನಂತರದ ಕಾಂಗ್ರೆಸ್ ಬೇರೆ. ಸಿದ್ದರಾಮಯ್ಯ ಆರಂಭದ ದಿನಗಳಲ್ಲಿ ಸಮಾಜವಾದಿಯಲ್ಲಿದ್ದರು.ನಂತರ ಜೆಡಿಎಸ್ ಗೆ ಬಂದು ಆನಂತರ ಅಧಿಕಾರಕ್ಕಾಗಿ ಕಾಂಗ್ರೆಸ್ ಗೆ ಹೋದವರು ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷ ಈಗಲೇ ನೀವು ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಎಂದರೆ ಯಾವ ಪಕ್ಷಕ್ಕೆ ಹೋಗುತ್ತಾರೆ ಎನ್ನುವುದು ಪ್ರಶ್ನಾರ್ಥಕ ಚಿಹ್ನೆ ಇದೆ ಎಂದರು. ಇಂದಿನ ವಿವಾದಗಳನ್ನು ಎಳೆದು ತಂದವರೇ ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದರು.

ವೀರಶೈವ ಲಿಂಗಾಯತ ವಿವಾದ, ಮೋದಿ ಅವರನ್ನು ನರಹಂತಕ ಎಂದು ಕರೆದಿದ್ದು ಯಾರು ಎಂಬುದನ್ನು ಜನ ತಿಳಿದುಕೊಂಡಿದ್ದಾರೆ.ವಿವಾದಗಳು ಎಳೆದು ತಂದು ಜನರನ್ನು ದಿಕ್ಕು ತಪ್ಪಿಸುವುದು ಅವರ ಆಶಯವಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!