JOB| ಕೊಂಕಣ ರೈಲ್ವೆ ನಿಗಮದಲ್ಲಿ 190 ಅಪ್ರೆಂಟಿಸ್‌ ಹುದ್ದೆಗಳ ನೇಮಕಾತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೊಂಕಣ ರೈಲ್ವೆ ನಿಗಮ ನಿಯಮಿತದಲ್ಲಿ 190 ಟ್ರೈನಿ ಅಪ್ರೆಂಟಿಸ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಬಿ.ಇ/ಬಿ.ಟೆಕ್‌, ಡಿಪ್ಲೋಮಾ, ಪದವಿ ವಿದ್ಯಾರ್ಹತೆ ಜೊತೆಗೆ ಸೆಪ್ಟೆಂಬರ್‌ 1,2023ರ ಅನ್ವಯ ಕನಿಷ್ಟ 18 ರಿಂದ ಗರಿಷ್ಟ 25 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಮೆರಿಟ್‌ ಆಧಾರದ ಮೇಲೆ ದಾಖಲೆ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಡಿಸೆಂಬರ್‌ 10,2023ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!