ಹೊಸದಿಗಂತ ವರದಿ ಸುಬ್ರಹ್ಮಣ್ಯ:
ಹಿಂದು ಧಾರ್ಮಿಕ ದತ್ತಿ ಇಲಾಖೆ ಅಧೀನದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಸೇವೆಗಳಲ್ಲಿ ಒಂದಾದ ಸರ್ಪಸಂಸ್ಕಾರಕ್ಕೆ ಇನ್ನು ಮುಂದೆ 4200 ರೂ. ಪರಿಷ್ಕೃತ ದರವನ್ನು ನಿಗದಿಪಡಿಸಲಾಗಿದೆ.
ಶ್ರೀ ದೇವಳದಲ್ಲಿ ಸರ್ಪದೋಷ ನಿವಾರಣೆಗಾಗಿ ನಡೆಸುವ ಸರ್ಪಸಂಸ್ಕಾರ ಸೇವೆಯ ಸೇವಾ ದರವನ್ನು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶದಂತೆ 3,200 ರೂ.ನಿಂದ 4,200 ರೂ.ಗೆ ಹೆಚ್ಚಿಸಿ ಪರಿಷ್ಕರಿಸಲಾಗಿದೆ. ಭಕ್ತಾದಿಗಳು ಸಹಕರಿಸಬೇಕಾಗಿ ಶ್ರೀ ದೇವಳದಿಂದ ವಿನಂತಿಸಲಾಗಿದೆ.