ದೇಶವ್ಯಾಪಿ ಪಿಎಫ್‌ಐ ವಿರುದ್ಧ ಎನ್‌ಐಎ ದಾಳಿ: ರಾಹುಲ್ ಗಾಂಧಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇಶದ 13 ರಾಜ್ಯಗಳಲ್ಲಿ ಬುಧವಾರ ಮಧ್ಯರಾತ್ರಿಯಿಂದಲೇ ಪಿಎಫ್‌ಐ ಕಚೇರಿ ಹಾಗೂ ಸಂಘಟನೆಗೆ ಸಂಬಂಧಿಸಿದ ಸದಸ್ಯರ ಮನೆಯ ಮೇಲೆ ಎನ್‌ಐಎ ದಾಳಿ ನಡೆಸಿದೆ.

ಈ ಕುರಿತಾಗಿ ಗುರುವಾರ್ ಎರ್ನಾಕುಲಂನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಎಲ್ಲ ರೀತಿಯ ಕೋಮುವಾದವು ಎಲ್ಲಿಂದ ಬಂದರೂ ಅದನ್ನು ಎದುರಿಸಬೇಕು. ಅದರ ಬಗ್ಗೆ ಶೂನ್ಯ ಸಹಿಷ್ಣುತೆ ಇರಬೇಕು. ಕೋಮುವಾದ ಮತ್ತು ದ್ವೇಷ ಮತ್ತು ಹಿಂಸಾಚಾರದ ರಾಜಕೀಯವನ್ನು ನಿಯಂತ್ರಿಸಲು ಪಿಎಫ್‌ಐ ಮೇಲೆ ದೇಶವ್ಯಾಪಿ ನಡೆದಿರುವ ದಾಳಿಗಳು ಅಗತ್ಯ ಎಂದು ಹೇಳುವ ಮೂಲಕ ದಾಳಿಗೆ ಬೆಂಬಲ ನೀಡಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆಯ ದಾಳಿ ಈವರೆಗೆ ಮುಂದುವರಿದಿದ್ದು, ಪಿಎಫ್‌ಐಗೆ ಸಂಬಂಧಿಸಿದ್ದ ಸಾಕಷ್ಟು ಸ್ಥಳಗಳ ಮೇಲೆ ದಾಳಿ ನಡೆಸಿ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾದಕ ಕೃತ್ಯಗಳಿಗೆ ಹಣ ಒದಗಿಸಿದ ಆರೋಪದ ಮೇಳೆ ಈ ಕ್ರಮ ಕೈಗೊಳ್ಳಲಾಗಿದ್ದು, ಪಿಎಫ್‌ಐನ 106 ಸದಸ್ಯರನ್ನು ಬಂಧಿಸಲಾಗಿದೆ.

ಪಿಎಫ್‌ಐ ಮಾತ್ರವಲ್ಲದೆ, ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಮೇಲು ದಾಳಿಗಳು ನಡೆದಿವೆ. ಆಂಧ್ರಪ್ರದೇಶದಿಂದ 5, ಅಸ್ಸಾಂನಿಂದ 9, ದೆಹಲಿಯಿಂದ 3, ಕರ್ನಾಟಕದಿಂದ 20, ಕೇರಳದಿಂದ 22, ಸಂಸದರಿಂದ 4 ಮತ್ತು ಮಹಾರಾಷ್ಟ್ರದಿಂದ 20 ಮಂದಿಯನ್ನು ಬಂಧಿಸಲಾಗಿದೆ. ಮಧ್ಯಪ್ರದೇಶದ ಇಂದೋರ್ ಹಾಗೂ ಉಜ್ಜಯನಿಯಲ್ಲಿ 4 ಮಂದಿ ರಾಜ್ಯ ನಾಯಕರನ್ನು ಬಂಧನ ಮಾಡಲಾಗಿದೆ. ಪಿಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಓಎಂಎಸ್‌ ಸಲಾಮ್ ಮತ್ತು ದೆಹಲಿ ಅಧ್ಯಕ್ಷ ಪರ್ವೇಜ್ ಅಹ್ಮದ್ ಅವರನ್ನೂ ಕೂಡ ಬಂಧಿಸಲಾಗಿದೆ. ಕೆಲವರನ್ನು ದೆಹಲಿಯ ಎನ್‌ಐಎ ಕೇಂದ್ರ ಕಚೇರಿಗೆ ವಿಚಾರಣೆಗಾಗಿ ಕರೆತರಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!