ಹೊಸದೊಂದು ದಾಖಲೆ ಬರೆದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ, ಆದಾಯ ಗಳಿಕೆಯಲ್ಲಿ ನಂ.1

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮತ್ತೊಂದು ದಾಖಲೆ ಮಾಡಿದೆ, ಇತಿಹಾಸದಲ್ಲೇ ಹೆಚ್ಚು ಆದಾಯ ಬರುವ ದೇಗುಲ ಖ್ಯಾತಿ ಪಡೆದಿದ್ದು, ಕಳೆದ ವರ್ಷದಲ್ಲಿ ಶ್ರೀ ಕ್ಷೇತ್ರದ ಆದಾಯ ಬರೋಬ್ಬರಿ 123 ಕೋಟಿ ರೂಪಾಯಿಗಳಾಗಿದೆ.

ಇದು ದಾಖಲೆಯ ಮೊತ್ತವಾಗಿದ್ದು, ಹೊಸದೊಂದು ದಾಖಲೆ ನಿರ್ಮಾಣವಾಗಿದೆ. 123,64,49,480,87 ರೂಪಾಯಿ ಆದಾಯ ಗಳಿಸಿದ್ದು, ಈ ಬಾರಿಯೂ ಮೊದಲ ಸ್ಥಾನ ಪಡೆಯುವ ನಿರೀಕ್ಷೆ ಇದೆ.

ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರದ ಬಾಡಿಗೆ, ಕಟ್ಟಡಗಳ ಬಾಡಿಗೆ, ಕೃಷಿ ತೋಟದ ಆದಾಯ ಎಲ್ಲವೂ ಇದರಲ್ಲಿ ಸೇರಿದೆ. ಸರ್ಪದೋಷ ಪರಿಹಾರಕ್ಕೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ದಿನವೂ ಸಾವಿರಾರು ಭಕ್ತರು ಆಗಮಿಸಿತ್ತಾರೆ.
2019-20 ಯಲ್ಲಿ 98.92 ಕೋಟಿ ರೂಪಾಯಿ ಹಾಗೂ 2020-21ರಲ್ಲಿ 12.72 ಕೋಟಿ ಆದಾಯವನ್ನು ಗಳಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!