October 7, 2026
Wednesday, October 7, 2026
spot_img

ಇಂಗ್ಲೆಂಡ್ ಅಖಾಡದಲ್ಲಿ ‘ಕುಲ್ದೀಪ್’ ಕಮಾಲ್: ಕೌಂಟಿ ಕ್ರಿಕೆಟ್‌ನಲ್ಲಿ ಇತಿಹಾಸ ಬರೆದ ಸ್ಪಿನ್ ಮಾಂತ್ರಿಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಷ್ಟೋ ಜನ ಆಟಗಾರರಿಗೆ ಭಾರತ ತಂಡದಲ್ಲಿ ಒಂದೆರಡು ಮ್ಯಾಚ್ ಆಡೋಕೆ ಸಿಗೋದೇ ಕಷ್ಟ. ಅದ್ರಲ್ಲೂ ಸ್ಪಿನ್ನರ್ ಕುಲ್ದೀಪ್ ಯಾದವ್ ಕಥೆಯಂತೂ ಇನ್ನೂ ವಿಚಿತ್ರ. ಮ್ಯಾಚ್‌ನಲ್ಲಿ ಸೂಪರ್ ಆಗಿ ಬೌಲಿಂಗ್ ಮಾಡಿ ವಿಕೆಟ್ ತೆಗೆದ್ರೂ, ಮುಂದಿನ ಮ್ಯಾಚ್‌ನಲ್ಲಿ ಅವರಿಗೆ ಜಾಗನೇ ಇರಲ್ಲ. ಬೆಂಚ್ ಕಾಯಿಸೋದೇ ಅವರ ಕೆಲಸ ಆಗೋಗಿತ್ತು. ಆದ್ರೆ, ಚಲ ಬಿಡದ ಕುಲ್ದೀಪ್ ಅಂತ ಇಂಗ್ಲೆಂಡ್ ನೆಲದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿ ತೋರಿಸಿದ್ದಾರೆ.

ಈಗ ಇಂಗ್ಲೆಂಡ್‌ನಲ್ಲಿ ನಡೀತಿರೋ ಖ್ಯಾತ ‘ಕೌಂಟಿ ಚಾಂಪಿಯನ್‌ಶಿಪ್’ನಲ್ಲಿ ಯಾರ್ಕ್‌ಷೈರ್ ತಂಡದ ಪರ ಆಡ್ತಿರೋ ಕುಲ್ದೀಪ್, ಎಸೆಕ್ಸ್ ತಂಡಕ್ಕೆ ಶಾಕ್ ಕೊಟ್ಟಿದ್ದಾರೆ. ಹೆಡಿಂಗ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ತಮ್ಮ ಕೈಚೆಳಕ ತೋರಿಸಿ, ಎದುರಾಳಿ ಬ್ಯಾಟರ್‌ಗಳಿಗೆ ಬಾಲ್ ಎಲ್ಲಿ ಹೋಗ್ತಿದೆ ಅಂತಲೇ ತಿಳಿಯದಂತೆ ಮ್ಯಾಜಿಕ್ ಮಾಡಿದ್ದಾರೆ.

ಯಾರ್ಕ್‌ಷೈರ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 390 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಅದಕ್ಕೆ ಉತ್ತರವಾಗಿ ಬ್ಯಾಟಿಂಗ್‌ಗೆ ಇಳಿದ ಎಸೆಕ್ಸ್ ತಂಡ, ಕುಲ್ದೀಪ್ ಮತ್ತು ವೇಗಿ ಜಾರ್ಜ್ ಹಿಲ್ ದಾಳಿಗೆ ತಡೆಯಲಾರದೆ ಕೇವಲ 171 ರನ್‌ಗಳಿಗೆ ಆಲೌಟ್ ಆಯ್ತು. ಕುಲ್ದೀಪ್ 20 ಓವರ್‌ಗಳಲ್ಲಿ 70 ರನ್ ಕೊಟ್ಟು 4 ಪ್ರಮುಖ ವಿಕೆಟ್ ಕಬಳಿಸಿದ್ರು. ಹಿಲ್ ಕೂಡ 12 ರನ್‌ಗೆ 3 ವಿಕೆಟ್ ಕಿತ್ತು ಸಾಥ್ ನೀಡಿದ್ರು.

ಈ ಅದ್ಭುತ ಪ್ರದರ್ಶನದಿಂದ ಯಾರ್ಕ್‌ಷೈರ್ ತಂಡ ಕೇವಲ 3 ದಿನಗಳಲ್ಲೇ ಇನ್ನಿಂಗ್ಸ್ ಮತ್ತು 106 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಭಾರತೀಯ ಟೆಸ್ಟ್ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ ಎಂದು ಸುಮ್ಮನೆ ಕೂರದೆ, ವಿದೇಶಿ ನೆಲದಲ್ಲಿ ಹೋಗಿ ತನ್ನ ತಾಕತ್ತು ಏನು ಎದು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಕುಲ್ದೀಪ್. ಈ ಪ್ರದರ್ಶನ ನೋಡಿಯಾದ್ರೂ ಸೆಲೆಕ್ಟರ್ಸ್ ಕಣ್ಣು ತೆರೆಯುತ್ತಾ ಎಂಬುದು ಕಾದು ನೋಡಬೇಕು.

Must Read