ಕಾಂಗ್ರೆಸ್ ಗೆ ಕುಮಾರಣ್ಣನೇ ಟಾರ್ಗೆಟ್: ನಿಖಿಲ್ ಕುಮಾರಸ್ವಾಮಿ ಕಿಡಿ

ಹೊಸದಿಗಂತ ವರದಿ ಬೆಂಗಳೂರು :

ಬಿಜೆಪಿಗೆ ಸಿ.ಪಿ ಯೋಗೇಶ್ವರ್ ರಾಜೀನಾಮೆ ಕೊಟ್ಟಿರುವುದು ಆಶ್ಚರ್ಯ ಪಡುವಂತದ್ದು ಏನೂ ಇಲ್ಲ , ಗಾಳಿಯಲ್ಲಿ ಗುಂಡು ಹೊಡೆಯುವಂತ ಆರೋಪ ಅಲ್ಲ, ಯಾವಾಗ ತರಾತುರಿ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ರೋ ಅವತ್ತೇ ಗೊತ್ತಿತ್ತು ಇದರಲ್ಲಿ ಆಶ್ಚರ್ಯ ಏನು ಇಲ್ಲ ಎಂದರು.

ಚನ್ನಪಟ್ಟಣ ಟಿಕೆಟ್ ವಿಚಾರದಲ್ಲಿ ಕಳೆದ ಎರಡು ತಿಂಗಳಿಂದ ನಿರಂತರವಾಗಿ ನನ್ನ ಹೆಸರು ಚಾಲ್ತಿಯಲ್ಲಿದೆ. ಜೆಡಿಎಸ್ ಕಾರ್ಯಕರ್ತರು ನಿಖಿಲ್ ಗೆ ಟಿಕೆಟ್ ಕೊಟ್ಟರೆ ನಾವು ಕೆಲಸ ಮಾಡ್ತೀವಿ ಅಂದಿದ್ದರು, ಇಲ್ಲಿ ಯಾವುದೇ ತೀರ್ಮಾನಗಳು ಅಂತಿಮ ಆಗಬೇಕಾದರೆ ಎನ್‌ಡಿಎ ಕಡೆಯಿಂದ ಘೋಷಣೆ ಆಗಬೇಕು. ನಿನ್ನೇ ಕುಮಾರಣ್ಣ ಅವರು ಇದನ್ನೇ ಹೇಳಿದ್ದಾರೆ ತಾಳಿದವನು ಬಾಳಿಯಾನು ಅಂತ. ಅಂತಿಮವಾಗಿ ನಮ್ಮ ನಾಯಕರು ಮತ್ತು ಬಿಜೆಪಿ ನಾಯಕರು ಅಭ್ಯರ್ಥಿಯನ್ನ ಘೋಷಣೆ ಮಾಡುತ್ತಾರೆ ಎಂದಿದ್ದಾರೆ.

ಕಾಂಗ್ರೆಸ್ ಗೆ ಕುಮಾರಣ್ಣನೇ ಟಾರ್ಗೆಟ್ : ಕಾಂಗ್ರೆಸ್ ಗೆ ಕುಮಾರಸ್ವಾಮಿಯೇ ಟಾರ್ಗೆಟ್ ಮಾಧ್ಯಮ ಪ್ರಶ್ನೆಗೆ ಉತ್ತರಿಸಿ ಅವರು, ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶ 14 ಲೋಕಸಭೆ ಕ್ಷೇತ್ರಗಳಲ್ಲಿ 12 ಕ್ಷೇತ್ರವನ್ನು
ಗೆದ್ದಿದ್ದೇವೆ. ಅದರಲ್ಲಿ ಪ್ರಾಮುಖ ಪಾತ್ರ ನಮ್ಮ ಕಾರ್ಯಕರ್ತರು, ಕುಮಾರಣ್ಣನ ನಾಯಕತ್ವ ಈ ವಿಚಾರಕ್ಕೆ ಕುಮಾರಣ್ಣ ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!