August 26, 2026
Wednesday, August 26, 2026
spot_img

ಗಾಂಜಾ ನಶೆಯಲ್ಲಿದ್ದ 22 ಮಂದಿಗೆ ಕುಮಟಾ ಪೊಲೀಸರ ಬಲೆ: ವಾರದೊಳಗೆ 4 ಪ್ರತ್ಯೇಕ ಪ್ರಕರಣ ದಾಖಲು

ಹೊಸದಿಗಂತ ವರದಿ ಕಾರವಾರ:

ಕಾರವಾರ ಜಿಲ್ಲೆಯ ಕುಮಟಾದಲ್ಲಿ ಮಾದಕ ಗಾಂಜಾ ಸೇವನೆಯಲ್ಲಿ ತೊಡಗಿರುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದು ಒಂದು ವಾರದಲ್ಲಿ 4 ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ನಶೆಯಲ್ಲಿದ್ದ 22 ಜನರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಮೂರುರು ಗುಡ್ಡ, ರೈಲ್ವೆ ರಸ್ತೆ ಸೇರಿ ಹಲವು ಕಡೆ ದಾಳಿ

ಬಂಧಿತರಲ್ಲಿ ಬಹುತೇಕ ಜನ ಉತ್ತರ ಭಾರತದ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಒಡಿಶಾ ಮತ್ತಿತರ ಕಡೆಯವರಾಗಿದ್ದು ಕರ್ನಾಟಕದ ಅಂಕೋಲಾ ಮತ್ತು ಮುದ್ದೇಬಿಹಾಳದ ಇಬ್ಬರು ಸಹ ಪೊಲೀಸರ ವಶವಾಗಿದ್ದಾರೆ. ಬಂಧಿತರೆಲ್ಲರೂ ಸ್ಥಳೀಯ ಕಂಪನಿಯೊಂದರಲ್ಲಿ ಗುತ್ತಿಗೆ ಆಧಾರದಲ್ಲಿ ಕೂಲಿ ಕೆಲಸ
ಮಾಡುವವರಾಗಿದ್ದಾರೆ.

ಇದನ್ನೂ ಓದಿ:

ಕುಮಟಾದ ಮೂರೂರು ಗುಡ್ಡದ ಬಳಿ ಗಾಂಜಾ ಸೇವಿಸುತ್ತಿದ್ದ 11 ಜನರನ್ನು ಪಿ.ಎಸ್.ಐ ಖಾದರಭಾಷಾ ಬಂಧಿಸಿದ್ದಾರೆ. ಉತ್ತರ ಪ್ರದೇಶದ ವಿಜಯಲಾಲ ಪಾಗು(55)ಚಂದಾರಾಮ ವಿಜಯಲಾಲ್(31) ಚಂದರಿಕ್ ವಿಜಯಲಾಲ್(27)ಬಲ್ಲೂ ಜಗಡೂ(38) ಓರಿಸ್ಸಾದ ರಾಮಕೃಷ್ಣ ದಾಸ್(50) ತ್ರಿಲೋಚನ್ ದೇವ್(56) ಕುಶ ದಲಾಯ ಕಾಟಿ(40) ಪಶ್ಚಿಮ ಬಂಗಾಳದ ಸುದರ್ಶನ ಗಿರಿ(30) ಭಿಮಲ್ಪಾಲ್(55) ಅಂಕೋಲಾ ಹುಲಿದೇವರವಾಡದ ಮಾದೇವ ರಾಮಾ ನಾಯ್ಕ(54)ಮತ್ತು ವಿಜಯಪುರ ಮುದ್ದೇಬಿಹಾಳದ ಯಲಗುರೇಶ ಶಿವನಗೌಡ(21) ಬಂಧಿತ ಆರೋಪಿಗಳಾಗಿದ್ದಾರೆ.

ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ದೃಢ

ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಮೂರುರು ಗುಡ್ಡದ ಸಮೀಪ ಗಾಂಜಾ ಸೇವಿಸುತ್ತಿದ್ದ ಪಶ್ಚಿಮ ಬಂಗಾಳದ ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಮಪ್ರಸಾದ ಕಂದರ್(32) ತರುಣಕುಮಾರ್(40) ರಜಿಬ್ ರತನ್ ಕುಮಾರ್(35) ರಬಿನ್ ಗಿರಿ(38)ಲಕ್ಷ್ಮಣ ಮಂಡಲ್(48) ಎನ್ನುವವರನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು ಎಲ್ಲರೂ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದೆ.

ಜುಲೈ 28 ರಂದು ಮೂರುರು ಗುಡ್ಡದ ಸಮೀಪ ಗಾಂಜಾ ಸೇವಿಸುತ್ತಿದ್ದ ಪಶ್ಚಿಮ ಬಂಗಾಳದ ವಿದಾಯಕ್ ಬಿಸ್ವಾಸ್ ಮತ್ತು ತಪನ್ ಪಾಲ್ ಎನ್ನುವವರನ್ನು ಮತ್ತು ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಗಾಂಜಾ ಸೇವಿಸುತ್ತಿದ್ದ ಆಶಿಸ್ ಮಂಡಲ್ ಮತ್ತು ಪ್ರಕಾಶ್ ಮಂಡಲ್ ಪೊಲೀಸರ ವಶವಾಗಿದ್ದರು. ಬಂಧಿತರೆಲ್ಲರ ಮೇಲೆ ಮಾದಕ ದ್ರವ್ಯ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !