ಕುಂದಾಪುರ ಪ್ರಾಂಶುಪಾಲರ ಉತ್ತಮ ಶಿಕ್ಷಕ ಪ್ರಶಸ್ತಿ ತಡೆ: ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿಕ್ಷಕರ ದಿನಾಚರಣೆ ನಿಮಿತ್ತ ರಾಜ್ಯ ಸರ್ಕಾರ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಇಂದು ಪ್ರದಾನ ಮಾಡಿದ್ದು, ಈ ವೇಳೆ ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲರಾದ ರಾಮಕೃಷ್ಣ ಜಿಬಿ ಅವರಿಗೂ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಆದರೆ, ಹಿಜಾಬ್‌ ವಿವಾದದ ಸಂದರ್ಭದಲ್ಲಿ ವಿದ್ಯಾರ್ಥಿನಿಯರನ್ನು ಗೇಟ್‌ನಲ್ಲಿಯೇ ತಡೆದಿದ್ದು ಇವರೇ ಎನ್ನುವುದು ಗೊತ್ತಾಗುತ್ತಿದ್ದಂತೆ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ಪ್ರಶಸ್ತಿಯನ್ನು ತಡೆಹಿಡಿದಿದೆ.

ಈ ಕುರಿತು ಬಿಜೆಪಿ ಭಾರೀ ಆಕ್ರೋಶ ವ್ಯಕ್ತಪಡಿಸುಸಿದ್ದು, ಇತ್ತ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿ, ಈ ಹಿಂದಿನ ಸರ್ಕಾರ ಆದೇಶ ಮಾಡಿದಾಗ ಪ್ರಿನ್ಸಿಪಾಲ್ ವರ್ತನೆ ಸರಿಯಿರಲಿಲ್ಲ. ಹೀಗಾಗಿ ಪ್ರಶಸ್ತಿ ತಡೆಹಿಡಿಯಲಾಗಿದೆ. ಪ್ರಶಸ್ತಿ ಕ್ಯಾನ್ಸಲ್‌ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹಿಂದಿನ ಸರ್ಕಾರ ಆದೇಶ ಮಾಡಿದಾಗ ಪ್ರಿನ್ಸಿಪಾಲ್ ವರ್ತನೆ ಸರಿಯಿರಲಿಲ್ಲ. ಹೀಗಾಗಿ ಪ್ರಶಸ್ತಿ ತಡೆಹಿಡಿಯಲಾಗಿದೆ, ಪ್ರಶಸ್ತಿ ರದ್ದು ಮಾಡಿಲ್ಲ. ವಿದ್ಯಾರ್ಥಿಗಳ ಜೊತೆ ಪ್ರಿನ್ಸಿಪಾಲ್‌ ರಾಮಕೃಷ್ಣ ವರ್ತನೆ ಸರಿಯಿರಲಿಲ್ಲ. ಈ ಬಗ್ಗೆ ಮತ್ತೆ ಪರಿಶೀಲನೆ ಮಾಡಿ ವರದಿ ನೀಡುತ್ತಾರೆ ಎಂದು ಹೇಳಿದರು.

ಛಲವಾದಿ ನಾರಾಯಣಸ್ವಾಮಿ ಹೇಳುವುದೇನು?
ರಾಮಕೃಷ್ಣಗೆ ಘೋಷಿಸಿದ್ದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಡೆ ವಿಚಾರದ ಬಗ್ಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿ, ಯಾರೋ ದೂರು ಕೊಟ್ಟಿದ್ದಾರೆ ಎಂದು ಪ್ರಶಸ್ತಿಗೆ ತಡೆ ನೀಡಿದ್ದಾರೆ. ಅಲ್ಲಿಗೆ ಹಿಜಾಬ್ ಬಗ್ಗೆ ಮಾತಾಡಿದ್ರೆ ಉತ್ತಮ ಅಂತಾ ಅಲ್ಲ. ಇದು ಸರ್ಕಾರ ನಡೆದುಕೊಳ್ಳೋ ರೀತಿನಾ? ಇದು ಡಬಲ್ ಸ್ಟಾಂಡರ್ಡ್ ಧೋರಣೆ. ಈ ರೀತಿಯ ಕಾರ್ಯದಲ್ಲಿ ಸರ್ಕಾರಗಳು ತೊಡಗಬಹುದೇ? ರಾಜ್ಯ ಸರ್ಕಾರ ಕೂಡಲೇ ಮರುಪರಿಶೀಲನೆ ಮಾಡಬೇಕು. ಇದರಿಂದ ಸಮಾಜದಲ್ಲಿ ವೈಷಮ್ಯ ಹೆಚ್ಚು ಬೆಳೆಯುತ್ತವೆ. ಇದನ್ನ‌ ದೊಡ್ಡದು ಮಾಡಬೇಡಿ, ಶಾಲೆ ಪವಿತ್ರವಾಗಿರಲು ಬಿಡಿ ಎಂದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

2 COMMENTS

  1. ಅಂದು ಹಿಜಾಬ್ ಗಳಿಗೆ ಗೇಟ್ ನಲ್ಲಿ ನಿಲ್ಲಿಸಿ ಕಾಲೇಜಿನ ವಸ್ತ್ರ ಸಂಹಿತೆಯನ್ನು ಎತ್ತಿ ಹಿಡಿದು ಜನಮೆಚ್ಚುಗೆ ಪಡೆದರಲ್ಲ ಅದೇ ಅವರಿಗೆ ಪ್ರಶಸ್ತಿ, ಇಂತಹ ಬೆಲೆಯಿಲ್ಲದವರು ಕೊಡುವ ಪ್ರಶಸ್ತಿ ಅವರಿಗೆ ಆವಶ್ಯಕತೆಯಿಲ್ಲ

  2. ಇನ್ನು ಮುಂದೆ ಈ ಶಿಕ್ಷಕರು ರಾಜ್ಯ ಸರ್ಕಾರ ಉತ್ತಮ ಶಿಕ್ಷಕ ಪ್ರಶಸ್ತಿ ನೀಡುವಾಗ ಖಂಡಿತಾ ಅದನ್ನು ನಿರಾಕರಿಸಬೇಕು. ಯಾವುದೇ ಕಾರಣಕ್ಕೂ ಪ್ರಶಸ್ತಿಯನ್ನು ಪಡೆಯಕೂಡದು. ಅವರಿಗೆ ಅವರಿಂದ ಕಲಿತಿರುವ, ಕಲಿಯುತ್ತಿರುವ ವಿದ್ಯಾರ್ಥಿಗಳೇ ಗೌರವಿಸುತ್ತಿರುವಾಗ ಈ ಕೊಳಕು ರಾಜಕೀಯ ದೊಂಬರಾಟದ ಪಕ್ಷಗಳಿಂದ ಕಲುಷಿತವಾಗಿರುವ ಪ್ರಶಸ್ತಿಯ ಅವಶ್ಯಕತೆ ಇಲ್ಲ ಎಂದೇ ನನ್ನ ಅನಿಸಿಕೆ.

LEAVE A REPLY

Please enter your comment!
Please enter your name here

error: Content is protected !!