ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಯುವ ಮುನ್ನ ರೇಣುಕಾಸ್ವಾಮಿ ಏನೆಲ್ಲಾ ಅನುಭವಿಸಿದ್ದರು ಎನ್ನುವ ಫೋಟೊಗಳು ಇದೀಗ ಪೊಲೀಸರ ಕೈ ಸೇರಿದ್ದು, ಎಲ್ಲೆಡೆ ವೈರಲ್ ಆಗಿವೆ.
ರೇಣುಕಾಸ್ವಾಮಿ ಕೇಸ್‌ನಲ್ಲಿ ನಡೆದ ಕ್ರೌರ್ಯಕ್ಕೆ ಮತ್ತಷ್ಟು ಫೋಟೋಗಳು ಸಾಕ್ಷಿಯಾಗಿವೆ. ಒಂದೊಂದು ಫೋಟೋಗಳು ಬೇರೆ ಬೇರೆಯ ಕಥೆಗಳನ್ನೇ ಹೇಳುತ್ತಿವೆ. ಒಂದು ಫೋಟೋದಲ್ಲಿ ರೇಣುಕಾಸ್ವಾಮಿ ಶರ್ಟ್ ಬಿಚ್ಚಿಸಿ ಹಿಂಸೆ ಕೊಟ್ಟಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಪುಡಿ, ಪುಡಿಯಾದ ಲಾಠಿ ಭೀಕರತೆಯನ್ನು ಬಿಚ್ಚಿಟ್ಟಿದೆ. ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ದರ್ಶನ್ ಗ್ಯಾಂಗ್ ಲಾಠಿ ಪುಡಿಯಾಗೋ ಹಾಗೆ ಹಲ್ಲೆ ಮಾಡಿದೆ. ಹಗ್ಗದಿಂದ ಕಟ್ಟಿ ಹಾಕಿ ಮರದ ಕೊಂಬೆಯಿಂದ ಹಲ್ಲೆ ಮಾಡಲಾಗಿದೆ.
ಶೆಡ್‌ಗೆ ಕರೆ ತಂದ ರೇಣುಕಾಸ್ವಾಮಿಗೆ ಮೆಗ್ಗರ್ನಿಂದ ಕರೆಂಟ್ ಶಾಕ್ ನೀಡಲಾಗಿದೆ. ತಲೆಗೆ ಹೊಡೆದು ಕೊಲೆ ಮಾಡಲಾಗಿದೆ.