May 9, 2026
Saturday, May 9, 2026
spot_img

ಕುತ್ತಾರಿನಲ್ಲಿ ಕೊರಗಜ್ಜ ಹೆಸರಲ್ಲಿ ವೃತ್ತ ನಿರ್ಮಿಸಲು ಗುಂಪಿಂದ ಆಕ್ಷೇಪ: ಸ್ಪೀಕರ್ ಖಾದರ್‌ಗೆ ಘೇರಾವ್ ವೀಡಿಯೋ ವೈರಲ್

ಹೊಸದಿಗಂತ ವರದಿ ಉಳ್ಳಾಲ:

ನಿಟ್ಟೆ ಪರಿಗಣಿತ ವಿವಿಯು ಕುತ್ತಾರು ಜಂಕ್ಷನ್ ನಲ್ಲಿ ವೃತ್ತವೊಂದನ್ನ ನಿರ್ಮಿಸುತ್ತಿದ್ದು,ಇಲ್ಲಿ ಕೊರಗಜ್ಜನ ಹೆಸರಲ್ಲಿ ವೃತ್ತ ನಿರ್ಮಾಣ ಮಾಡಬಾರದೆಂದು ಭಿನ್ನ ಕೋಮಿನ ಸಮುದಾಯದ ಗುಂಪೊಂದು ಸ್ಪೀಕರ್ ಖಾದರ್ ಅವರನ್ನ ಘೇರಾವ್ ಮಾಡಿ ತರಾಟೆಗೈದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಉಳ್ಳಾಲ ಮಾಸ್ತಿಕಟ್ಟೆಯ ರೆಸಾರ್ಟ್ ಒಂದರಲ್ಲಿ ಗುರುವಾರ ರಾತ್ರಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಗುಂಪೊಂದು ಸ್ಪೀಕರ್ ಖಾದರ್ ಅವರಲ್ಲಿ ಕುತ್ತಾರು ಜಂಕ್ಷನ್ ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣದ ಬಗ್ಗೆ ತಗಾದೆ ಎತ್ತಿದ್ದು ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕುತ್ತಾರು ಕೊರಗಜ್ಜನ ಆದಿಕ್ಷೇತ್ರಕ್ಕೆ ರಾಜ್ಯದ ವಿವಿಧ ಕಡೆಗಳಿಂದ ಬರುವ ಭಕ್ತಾದಿಗಳಿಗೆ ಮಾಹಿತಿ ನೀಡುವುದಕ್ಕಾಗಿ ವರುಷಗಳ ಹಿಂದೆ ಕುತ್ತಾರು ಜಂಕ್ಷನ್ ನಲ್ಲಿ ಸ್ಥಳೀಯ ಬಜರಂಗದಳ ಸಂಘಟನೆಯು ಕೊರಗಜ್ಜನ ಮುಟ್ಟಾಳೆ ಹಾಗೂ ದಂಟೆಯ ಪ್ರತಿಕೃತಿಯುಳ್ಳ ಸಣ್ಣ ವೃತ್ತವೊಂದನ್ನ ನಿರ್ಮಿಸಿತ್ತು. ಇದೀಗ ಆ ಸಣ್ಣ ವೃತ್ತವನ್ನ ತೆರವುಗೊಳಿಸಿ ನಿಟ್ಟೆ ಪರಿಗಣಿತ ವಿವಿಯು ನೂತನ “ಸೌಹಾರ್ದ ವೃತ್ತ” ನಿರ್ಮಿಸಲು ಮುಂದಾಗಿದ್ದು ವೃತ್ತದಲ್ಲಿ ಕೊರಗಜ್ಜನ ಆದಿ ಕ್ಷೇತ್ರ ಸೇರಿ ಇತರ ಧರ್ಮೀಯರ ಕ್ಷೇತ್ರದ ಮಾಹಿತಿಯನ್ನು ನೀಡುವ ರೂಪರೇಷೆ ಸಿದ್ಧ ಪಡಿಸಲಾಗಿದೆಯೆಂದು ಹೇಳಲಾಗುತ್ತಿದೆ.

ಇದರ ನಡುವೆ ಭಿನ್ನ ಕೋಮಿನ ಗುಂಪೊಂದು‌ ಸ್ಥಳೀಯ ಶಾಸಕ ಹಾಗೂ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರಿಗೆ ಘೇರಾವ್ ಹಾಕಿ ತರಾಟೆಗೈದಿದ್ದಲ್ಲದೆ ಆ ವೀಡಿಯೋ ಈಗ ಸಾಮಾಜಿಲಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !