ಭಾರತದ ಮೊದಲ ಆತ್ಮಹತ್ಯಾ ಬಾಂಬರ್..‌ ಈಸ್ಟ್ ಇಂಡಿಯಾ ಕಂಪನಿ ಶಸ್ತ್ರಾಗಾರಕ್ಕೆ ನುಗ್ಗಿ ತನ್ನನ್ನೇ ಸ್ಫೋಟಿಸಿಕೊಂಡವಳ ಕಥೆಯಿದು

ಹೊಸದಿಗಂತ ಡಿಜಿಟಲ್‌ ಡಿಜಿಟಲ್‌ ಡೆಸ್ಕ್‌
ಕುಯಿಲಿ ಅವರು 18 ನೇ ಶತಮಾನದಲ್ಲಿ ತಮಿಳುನಾಡಿನ ಶಿವಗಂಗೈ ಜಿಲ್ಲೆಯ ಕುಡಂಚವಾಡಿಯಲ್ಲಿ ಜನಿಸಿದರು. ಕುಯಿಲಿ ಅವರು 18 ನೇ ಶತಮಾನದಲ್ಲಿ ಈಸ್ಟ್ ಇಂಡಿಯಾ ಕಂಪನಿ ವಿರುದ್ಧದ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ ರಾಣಿ ವೇಲು ನಾಚಿಯಾರ್ ಅವರ ಸೇನಾ ಕಮಾಂಡರ್ ಆಗಿದ್ದರು.
ಅವರು ಭಾರತೀಯ ಇತಿಹಾಸದಲ್ಲಿ ಮೊದಲ ಆತ್ಮಹತ್ಯಾ ಬಾಂಬರ್ ಮತ್ತು ಮೊದಲ ಮಹಿಳಾ ಹುತಾತ್ಮರಾಗಿದ್ದರು.
ಈಸ್ಟ್ ಇಂಡಿಯಾ ಕಂಪನಿಯ ಕೋಟೆಯ ಮೇಲೆ ದಾಳಿ ಮಾಡುವಾಗ, 4000 ಮಹಿಳೆಯರಿದ್ದ ಅವಳ ಬೆಟಾಲಿಯನ್ ಬ್ರಿಟಿಷ್ ಫಿರಂಗಿಗಳಿಂದ ಗುಂಡು ಹಾರಿಸಲ್ಪಟ್ಟಿತು. ಈ ಹಂತದಲ್ಲಿ ಕುಯಿಲಿ ಯಾರೂ ಯೋಚಿಸಲು ಸಾಧ್ಯವಿಲ್ಲದಂತಹ ಸಾಹಸಕ್ಕೆ ಸಿದ್ಧರಾದಳು. ಅವಳು ತನ್ನ ದೇಹಕ್ಕೆ ತುಪ್ಪ ಮತ್ತು ಎಣ್ಣೆಯನ್ನು ಹಚ್ಚಿಕೊಂಡಳು, ತನ್ನನ್ನು ತಾನೇ ಬೆಂಕಿ ಹಚ್ಚಿಕೊಂಡು ಈಸ್ಟ್ ಇಂಡಿಯಾ ಕಂಪನಿಯ ಶಸ್ತ್ರಾಗಾರಕ್ಕೆ ಹಾರಿ ಅಷ್ಟೂ ಶಸ್ತ್ರಾಸ್ತ್ರಗಳನ್ನು ಒಮ್ಮೆಲೆ ಧ್ವಂಸಮಾಡಿದಳು. ಅವುಗಳೊಂದಿಗೆ ಕುಯಿಲಿ ದೇಹವೂ ಸಹ ಸಾವಿರಾರು ಭಾಗವಾಗಿ ಛಿದ್ರವಾಗಿ ಸಿಡಿದಿತ್ತು. ಈ ಮಹೋನ್ನತ ತ್ಯಾಗದ ಮೂಲಕ ಕುಯಿಲಿ ರಾಣಿ ವೇಲು ನಾಚಿಯಾರ್ಗೆ ವಿಜಯವನ್ನು ಖಾತ್ರಿಪಡಿಸಿದಳು. ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕುಯಿಲಿಯ ತ್ಯಾಗ, ದೈರ್ಯದ ಗುಣಗಳು ಸುವರ್ಣಾಕ್ಷರದಲ್ಲಿ ಬರೆಯಲ್ಪಡುವಂತಹದ್ದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!