ʻಬೇಗನ್‌ ಬಾಜಾ ಮತ್ತು ಚಂಪಾರಣ್‌ ಮೀಟ್‌ʼ ಪಾಕದಿಂದ ನ್ಯೂಯಾರ್ಕ್‌ನ ಬೆಸ್ಟ್‌ ಶೆಫ್‌ ಎನಿಸಿಕೊಂಡ ಭಾರತೀಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಸಿ ಪಾಕಪದ್ಧತಿ ಅದರ ಸುವಾಸನೆ ಪ್ರಪಂಚದಾದ್ಯಂತದ ರುಚಿಯನ್ನು ಹೆಚ್ಚಾಗಿ ಮೆಚ್ಚಿಸುತ್ತದೆ. ಹಾಗೆಯೇ ನ್ಯೂಯಾರ್ಕ್‌ನಲ್ಲಿರುವ ಚಿಂತನ್ ಪಾಂಡ್ಯ ಅವರ ರೆಸ್ಟೋರೆಂಟ್ ಕೂಡಾ ಈ ವಿಷಯದ ಹೊರತಾಗಿಲ್ಲ. ವಿಶ್ವವಿಖ್ಯಾತ ಬಾಣಸಿಗ ಮುಂಬೈನಲ್ಲಿ ಪಾಕಶಾಲೆಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಭಾರತೀಯ ಪಾಕಪದ್ಧತಿ ಮತ್ತು ಸಾಂಪ್ರದಾಯಿಕ ಪಾಕವಿಧಾನಗಳ ಮೇಲಿನ ಪ್ರೀತಿ ಮತ್ತು ದೇಶದ ಆಹಾರದ ಆದ್ಯತೆಗಳನ್ನು ಅನ್ವೇಷಿಸುವ ಬಯಕೆಯು ಪಾಂಡ್ಯ ಅವರ ಯಶಸ್ಸಿಗೆ ಕಾರಣವಾಯಿತು.

ಎಂಟು ವರ್ಷಗಳ ನಂತರ, ನ್ಯೂಯಾರ್ಕ್‌ನ ಜುನೂನ್‌ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ಅವಕಾಶ ಅವರಿಗೆ ಸಿಕ್ಕಿತು. ಆದರೆ, ಅವರಿಗೆ ಬೆಸ್ಟ್‌ ಶೆಫ್‌ ಹೆಸರನ್ನು ತಂದುಕೊಂಡಿದ್ದು ಮಾತ್ರ ರೆಸ್ಟೋರೆಂಟ್ ‘ರಾಹಿ’. ಇದು ತನ್ನ ಅಧಿಕೃತ ಪಾಕಪದ್ಧತಿಗೆ ಹೆಸರುವಾಸಿಯಾಗಿದೆ. ಭಕ್ಷ್ಯ ಭೋಜನಗಳ ಶ್ರೇಣಿ ಸುವಾಸನೆ ಮತ್ತು ಮಸಾಲೆಗಳ ವಿಶಿಷ್ಟ ಕಾಂಬಿನೇಷನ್‌ ಬಯಸುವವರಿಗೆ ಈ ರೆಸ್ಟೋರೆಂಟ್‌ ಕೇಂದ್ರವಾಗಿದೆ. ಇದರ ಜೊತೆ ಪಾಂಡ್ಯಗೆ ಇನ್ನೂ ಎರಡು ರೆಸ್ಟೋರೆಂಟ್‌ಗಳಿವೆ ಅವೇ ʻಅಡ್ಡಾ ಇಂಡಿಯನ್ ಕ್ಯಾಂಟೀನ್ʼ ಮತ್ತು ʻಧಮಾಕಾʼ. ಇವುಗಳಲ್ಲಿನ ಮೆನು ಕಾರ್ಡ್‌ ಒಂದೇ ಗುರಿಯನ್ನು ಹೊಂದಿದೆ ಅದೇ ಅಮೆರಿಕಕ್ಕೆ ಭಾರತದ ರುಚಿಯನ್ನು ತೋರಿಸುವುದು.

ರಾಹಿ ಉನ್ನತ ಮಟ್ಟದ ಭಾರತೀಯ ಪಾಕಪದ್ಧತಿಯ ಮೇಲೆ ಕೇಂದ್ರೀಕರಿಸಿದರೆ, ಅಡ್ಡಾದಲ್ಲಿ ಗ್ರಾಹಕರು ‘ಅತ್ಯುತ್ತಮ ಮತ್ತು ಬಾಯಲ್ಲಿ ನೀರೂರಿಸುವ’ ಬಿರಿಯಾನಿ ಸವಿಯುತ್ತಾರೆ. ನೀವು ಭಾರತೀಯ ಬೀದಿ ಆಹಾರ ಅಥವಾ ಹಳ್ಳಿಗಾಡಿನ ಪಾಕಪದ್ಧತಿಯ ಅಭಿಮಾನಿಯಾಗಿದ್ದರೆ, ಧಮಾಕಾ ಅದರಲ್ಲಿ ಫೇಮಸ್.‌ ಮಸಾಲೆಯುಕ್ತ ಕೊತ್ತಂಬರಿ ಚಟ್ನಿಯೊಂದಿಗೆ ಸ್ವಲ್ಪ ಚಿಕನ್ ಕೋಫ್ತಾ ಸವಿಯಿರಿ. ಅಥವಾ ವಡಾ ಪಾವ್ ಇಲ್ಲಿ ಮ್ಯಾಜಿಕ್‌ ಮಾಡುತ್ತದೆ. ಮುಂಬೈನಲ್ಲಿನ ತನ್ನ ಜೀವನವನ್ನು ನೆನಪಿಸುವ ಕೆಲವು ನೆಚ್ಚಿನ ಖಾದ್ಯಗಳನ್ನು ಪಾಂಡ್ಯ ಸೇರಿಸಿರುವುದು ಮೆನುವನ್ನು ಎದ್ದುಕಾಣುವಂತೆ ಮಾಡುತ್ತದೆ. ಅವೇ ಬೇಗನ್‌ ಬಾಜಾ ಮತ್ತು ಚಂಪಾರಣ್‌ ಮೀಟ್‌.

ಪಾಂಡ್ಯ ಅವರಿಗೆ ಈ ಭಕ್ಷ್ಯಗಳ ಹಿಂದಿನ ರಹಸ್ಯವೆಂದರೆ ಸರಳತೆ ಎನ್ನುತ್ತಾರೆ. ತಮ್ಮ ಈ ಸರಳ ಕಾರ್ಯ ವಿಧಾನದ ಮೂಲಕ ಪರಿಚಯಿಸಿದ ಭಾರತದ ಪಾಕ ಪದ್ದತಿಯಿಂದ ನ್ಯೂಯಾರ್ಕ್‌ ಜನರ ಮನಸನ್ನು ಗೆದ್ದಿದ್ದಾರೆ. ಬೇಗನ್‌ ಬಾಜಾ ಮತ್ತು ಚಂಪಾರಣ್‌ ಮೀಟ್‌, ವಡಾ ಪಾವ್‌ ಮುಂತಾದ ರುಚಿಕರವಾದ ಆಹಾರ ಪದ್ದತಿ ಇವರಿಗೆ ನ್ಯೂಯಾರ್ಕ್‌ನ ಬೆಸ್ಟ್‌ ಶೆಫ್‌ ಎಂಬ ಹೆಸರನ್ನು ತಂದುಕೊಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!