2022ರ ಐಪಿಎಲ್ ಮೆಗಾ ಹರಾಜಿನಿಂದ ದೂರ ಉಳಿದ ಕೈಲ್ ಜೇಮಿಸನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಜಿಲ್ಯಾಂಡ್​ ತಂಡದ ಆಲ್​ರೌಂಡರ್​ ಕೈಲ್ ಜೇಮಿಸನ್ 2022ರ ಐಪಿಎಲ್ ಮೆಗಾ ಹರಾಜಿನಿಂದ ದೂರ ಉಳಿಯುವುದಾಗಿ ಹೇಳಿಕೊಂಡಿದ್ದಾರೆ.
ತಾನು 2022ರ ಆವೃತ್ತಿಯನ್ನು ಮಾತ್ರ ಮಿಸ್​ ಮಾಡಿಕೊಳ್ಳಲಿದ್ದು, ಭವಿಷ್ಯದಲ್ಲಿ ಇಂಡಿಯನ್ ಟಿ20 ಲೀಗ್​ನಲ್ಲಿ ಆಡುವ ಭರವಸೆ ವ್ಯಕ್ತಪಡಿಸಿದ್ದಾರೆ.
ನಾನು ಈ ಬಾರಿ ಐಪಿಎಲ್​ ಆಡದಿರಲು ಒಂದೆರಡು ಕಾರಣಗಳಿವೆ.ಳೆದ 12 ತಿಂಗಳು ಐಸೋಲೇಷನ್‌, ಕ್ವಾರಂಟೈನ್​ ಮತ್ತು ಬಯೋ ಬಬಲ್‌ನಲ್ಲಿ ಸಾಕಷ್ಟು ಸಮಯ ಕಳೆದಿದ್ದು ತುಂಬಾ ಸವಾಲಾಗಿತ್ತು. ಮುಂದಿನ 12 ತಿಂಗಳು ವೇಳಾಪಟ್ಟಿಯನ್ನು ನೋಡಿದಾಗ ನನಗೆ ಈ ಬಿಡುವು ಮುಖ್ಯವಾಗಿದೆ. ಹಾಗಾಗಿ 6 ರಿಂದ 8 ವಾರಗಳ ಸಮಯವನ್ನು ಮನೆಯಲ್ಲಿ ಕಳೆಯಲು ಬಯಸಿದ್ದೇನೆ ಎಂದು ಜೇಮಿಸನ್ ತಿಳಿಸಿದ್ದಾರೆ.
ಕಳೆದ 12 ಮತ್ತು 14 ತಿಂಗಳಿಂದ ಕ್ರಿಕೆಟ್​ನಲ್ಲಿ ಏನು ಮಾಡಿದ್ದೇನೆಂಬುದನ್ನು ತಿರುಗಿ ನೋಡಿದ್ದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಾನಿನ್ನೂ ಯುವ ಆಟಗಾರ. ನನ್ನ ಆಟದ ಮೇಲೆ ಮತ್ತಷ್ಟು ಕೆಲಸ ಮಾಡಬೇಕಾದ ಅಗತ್ಯವಿದೆ. ಹಾಗಾಗಿ ನನ್ನ ಆಟದ ಮೇಲೆ ಹೆಚ್ಚಿನ ಕೆಲಸ ಮಾಡಬೇಕು ಹಾಗೂ ಎಲ್ಲಾ ಸಮಯದಲ್ಲಿ ಆಡಲು ಪ್ರಯತ್ನಿಸಬೇಕು. ಇದಕ್ಕೆ ನನಗೆ ತುಂಬಾ ಸಮಯ ಬೇಕಿದೆ, ಮನೆಯಲ್ಲಿದ್ದು ನನ್ನ ಆಟದ ಮೇಲೆ ಕೆಲಸ ಮಾಡಲಿದ್ದೇನೆ ಎಂದು ಆಲ್​ರೌಂಡರ್​ ಹೇಳಿದರು.
2021ರ ಆವೃತ್ತಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪರ ಆಡಿದ್ದ ಜೇಮಿಸನ್​, 9 ಪಂದ್ಯಗಳಲ್ಲಿ 9.60 ಎಕಾನಿಮಿಯಲ್ಲಿ 9 ವಿಕೆಟ್​ ಪಡೆದಿದ್ದರು.
2020ರಲ್ಲಿ ನ್ಯೂಜಿಲ್ಯಾಂಡ್​ ತಂಡಕ್ಕೆ ಪದಾರ್ಪಣೆ ಮಾಡಿದ್ದ ಜೇಮಿಸನ್ 12 ಟೆಸ್ಟ್​ ಪಂದ್ಯಗಳಲ್ಲಿ 60 ವಿಕೆಟ್​ ಪಡೆದಿದ್ದಾರೆ. 5 ಏಕದಿನ ಪಂದ್ಯಗಳಲ್ಲಿ 5, 8 ಟಿ20 ಪಂದ್ಯಗಳನ್ನಾಡಿದ್ದು 4 ವಿಕೆಟ್​ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!