ಲಾಲ್ ಸಿಂಗ್ ಚಡ್ಡಾ ಸಿನಿಮಾ ನೋಡೋ ಬದಲು ಹೀಗೆ ಮಾಡಿ ಅಂತಿದಾರೆ ನೆಟ್ಟಿಗರು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್‌ ಸಿನಿಮಾಗಳ ಮೇಲೆ ಇತ್ತೀಚೆಗೆ ಸಾಕಷ್ಟು ಅಸಮಾಧಾನ ಭುಗಿಲೇಳುತ್ತಿದೆ. ಆ ನಿಟ್ಟಿನಲ್ಲಿ ಅಮೀರ್‌ ಖಾನ್‌ ಹಾಗೂ ಕರಿನಾ ಕಪೂರ್‌ ನಟಿಸಿರುವ ʻಲಾಲ್‌ ಸಿಂಗ್‌ ಚೆಡ್ಡಾʼ ಕೂಡಾ ಹೊರತಾಗಿಲ್ಲ. ಆಗಸ್ಟ್‌ 11ರಂದು ತೆರೆ ಕಾಣಲಿರುವ ಈ ಸಿನಿಮಾ ವಿರುದ್ಧ ಕೆಲ ವರ್ಗದವರು ತಿರುಗಿಬಿದ್ದಿದ್ದಾರೆ. ಈ ಸಿನಿಮಾ ಬಹಿಷ್ಕಾರ ಮಾಡಬೇಕೆಂದು ನೆಟ್ಟಿಗರು ಅಭಿಯಾನ ಕೂಡ ಮಾಡಿದ್ದಾರೆ.

ಈ ಹಿಂದೆ ಅಮೀರ್‌ ಖಾನ್‌ ಹಾಗೂ ಕರೀನಾ ಕಪೂರ್‌ ನೀಡಿದ್ದ ಹೇಳಿಕೆಗಳು ಇದೀಗ ಈ ಸಿನಿಮಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಸೃಷ್ಟಿ ಮಾಡುತ್ತಿವೆ. ಶಿವಲಿಂಗಕ್ಕೆ ಹಾಲು ಸುರಿಯುವ ಬದಲು, ಬಡಮಕ್ಕಳ ಹೊಟ್ಟೆ ತುಂಬಿಸಿ ಎಂದಿದ್ದ ಅಮೀರ್‌ ಖಾನ್‌ ಹೇಳಿಕೆಗೆ ನೆಟ್ಟಿಗರು ಕೌಂಟರ್‌ ನೀಡುತ್ತಿದ್ದಾರೆ. ನೀವು ಹೇಳಿದ ಹಾಗೆ ನಾವು ಸಿನಿಮಾ ನೋಡುವುದಿಲ್ಲ ಬದಲಿಗೆ ಬಡಮಕ್ಕಳಿಗೆ ಹಾಲುಣಿಸುತ್ತೇವೆ ಎಂದು ಟಾಂಗ್‌ ಕೊಟ್ಟಿದ್ದಾರೆ. ಅಂತಿಮವಾಗಿ ಈ ವಿವಾದ ಸಿನಿಮಾ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!