Wednesday, June 7, 2023

Latest Posts

ಕೂಲಿ ಕಾರ್ಮಿಕರ ಮಗ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್

ದಿಗಂತ ವರದಿ ವಿಜಯಪುರ:

ಜಿಲ್ಲೆಯ ತಾಳಿಕೋಟೆ ಪಟ್ಟಣದ ಎಸ್.ಕೆ. ಪಿಯು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ರಾಹುಲ್ ರಾಠೋಡ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಸ್ಥಾನದಲ್ಲಿ ಉತ್ತೀರ್ಣನಾಗಿದ್ದಾನೆ.

ವಿದ್ಯಾರ್ಥಿ ರಾಹುಲ್ ರಾಠೋಡ ಪಿಯು ಪರೀಕ್ಷೆಯಲ್ಲಿ 592 ಅಂಕ ಪಡೆದು ಸಾಧನೆ ಮಾಡಿದ್ದಾನೆ. ವಿದ್ಯಾರ್ಥಿ ರಾಹುಲ್ ರಾಠೋಡ ಕುಟುಂಬ ಕಡು ಬಡತನದಾಗಿದ್ದು, ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದು, ಕೂಲಿಕಾರ್ಮಿಕರಾಗಿದ್ದಾರೆ.

ರಾಹುಲ್ ರಾಠೋಡನ ಸಾಧನೆ ಕಂಡು ವಿದ್ಯಾರ್ಥಿಯ ತಂದೆ- ತಾಯಿ ಮೋತಿಲಾಲ್ ಹಾಗೂ ಸವಿತಾ ಸಂತಸಪಟ್ಟಿದ್ದು, ವಿದ್ಯಾರ್ಥಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ. ಮೋತಿಲಾಲ್ ಗೆ ಮೂವರು ಮಕ್ಕಳು, ಓರ್ವ ಗಂಡು ಇಬ್ಬರು ಹೆಣ್ಣು ಮಕ್ಕಳಿದ್ದು, ಕೂಲಿ ಮಾಡಿ ಬದುಕು ಸಾಗಿಸುವ ಕುಟುಂಬವಾಗಿದೆ.

ರಾಹುಲ್ ರಾಠೋಡ ಮೂಲತಃ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮನನಾಯಕ್ ತಾಂಡಾದ ನಿವಾಸಿಯಾಗಿದ್ದು, ಹಾಸ್ಟೆಲ್ ನಲ್ಲಿದ್ದು ವಿದ್ಯಾಭ್ಯಾಸ ಮಾಡಿದ್ದಾನೆ. ತನ್ನ ಈ ಸಾಧನೆಗೆ ತಂದೆ- ತಾಯಿ, ಕಾಲೇಜಿನ ಉಪನ್ಯಾಸಕರು, ಶಿಕ್ಷಣ ವಿಭಾಗದ ಉಪನ್ಯಾಸಕಿ ಬಸಮ್ಮ ಪ್ರೇರಣೆಯಾಗಿದ್ದು, ಮುಂದೆ ಕಲಾವಿಭಾಗದಲ್ಲಿ ಬಿಎ ಮಾಡಿ ಎಲ್ ಎಲ್ ಬಿ ಕಲಿಯುವ ಆಸೆ ಹೊಂದಿದ್ದಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!