Thursday, June 1, 2023

Latest Posts

PUC RESULT | ಆರ್ಟ್ಸ್ ವಿಭಾಗದಲ್ಲಿ ಬೆಂಗಳೂರಿನ ತಬಸ್ಸುಮ್‌ಗೆ ಫಸ್ಟ್ ರ‍್ಯಾಂಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಕಲಾ ವಿಭಾಗದಲ್ಲಿ ಬೆಂಗಳೂರಿನ ತಬಸ್ಸುಮ್ ರಾಜ್ಯಕ್ಕೇ ಮೊದಲ ಸ್ಥಾನ ಪಡೆದಿದ್ದಾರೆ.

ಜಯನಗರದ ಎನ್‌ಎಂಕೆಆರ್‌ವಿ ಕಾಲೇಜಿನ ವಿದ್ಯಾರ್ಥಿನಿ ತಬಸ್ಸುಮ್ 600 ಅಂಕಗಳಿಗೆ 593 ಅಂಕಗಳನ್ನು ಪಡೆದು ಮೊದಲ ಸ್ಥಾನ ಗಳಿಸಿದ್ದಾರೆ.

ಕುಶನಾಯ್ಕ್ ಜಿ.ಎಲ್ ಬಳ್ಳಾರಿ, ದದ್ದಿ ಕರಿಬಸಮ್ಮ ಬಳ್ಳಾರಿ, ಮುತ್ತೂರು ಮಲ್ಲಮ್ಮ ಬಳ್ಳಾರಿ, ಪ್ರಿಯಾಂ ಕ ಕುಲಕರ್ಣಿ ಬೆಳಗಾವಿ ಹಾಗೂ ರಾಹುಲ್ ಮೋತಿಲಾಲ್ ರಾಥೋಡ್ ವಿಜಯಪುರ 592 ಅಂಕಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.

ಈ ಬಾರಿ 2,20,305ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,34,876 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಒಟ್ಟಾರೆ ಶೇ. 61.22 ರಷ್ಟು ಫಲಿತಾಂಶ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!