April 17, 2026
Friday, April 17, 2026
spot_img

ಲೋಕಸಭೆಯಲ್ಲಿ ಸಿಗದ ಒಮ್ಮತ: ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಹಿನ್ನಡೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆಯಲ್ಲಿ ಇಂದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಹಿನ್ನಡೆಯಾಗಿದೆ.

ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗಳು ಸೇರಿದಂತೆ ಸಂಸತ್ತಿನಲ್ಲಿ ಪರಿಚಯಿಸಲಾದ 3 ಪ್ರಮುಖ ಮಸೂದೆಗಳ ಮೇಲೆ ಇಂದು ಲೋಕಸಭೆಯಲ್ಲಿ ಮತದಾನ ನಡೆಯಿತು.

ಇಂದು ಮತದಾನಕ್ಕೆ ಇಳಿಸಿದಾಗ 540 ಸಂಸದರ ಪೈಕಿ 489 ಮಂದಿ ಸಂಸದರ ಮತದಾನ ಮಾಡಿದರು. ತಿದ್ದುಪಡಿಯ ಪರವಾಗಿ 278 ಮಂದಿ ಮತ ಚಲಾಯಿಸಿದ್ದರೆ, ವಿರುದ್ಧವಾಗಿ 211 ಮಂದಿ ಮತ ಚಲಾಯಿಸಿದರು. ಇದು ಪ್ರಮುಖ ಸಂವಿಧಾನ ತಿದ್ದುಪಡಿಯಾಗಿದ್ದ ಕಾರಣ ಮೂರನೇ ಎರಡರಷ್ಟು ಮತದಾನ ಪಡೆಯುವುದು ಅಗತ್ಯವಾಗಿತ್ತು. ಅಂದರೆ ಸುಮಾರು 360 ಮತಗಳು ಬೆಂಬಲದ ಅಗತ್ಯವಿತ್ತು. ಆದರೆ ಸರ್ಕಾರದ ಪರವಾಗಿ 278 ಮತಗಳು ಮಾತ್ರ ಚಲಾವಣೆಯಾಗಿತ್ತು. ಹೀಗಾಗಿ ಮಸೂದೆಗೆ ಹಿನ್ನಡೆಯಾಗಿದೆ.

ಪ್ರಸ್ತುತ, ಲೋಕಸಭೆಯಲ್ಲಿ ಎನ್​ಡಿಎಗೆ ಅಗತ್ಯವಾದ ಬೆಂಬಲ ಇಲ್ಲದ ಕಾರಣದಿಂದ ಈ ಮಸೂದೆಯನ್ನು ಅಂಗೀಕರಿಸಲು ವಿಪಕ್ಷಗಳ ಸಹಾಯದ ಅಗತ್ಯವಿತ್ತು. ಹೀಗಾಗಿಯೇ ಪ್ರಧಾನಿ ಮೋದಿ ಈ ಮಸೂದೆಗಳನ್ನು ಒಗ್ಗಟ್ಟಾಗಿ ಅಂಗೀಕರಿಸಲು ಮನವಿ ಮಾಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !