ಲಡಾಖ್‌ನಲ್ಲಿ ಹೆಲಿಕಾಪ್ಟರ್‌ ಸೇವೆ: ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಲಭ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಸೇರಿದಂತೆ ಸಮೀಪದ ಪ್ರದೇಶಗಳಲ್ಲಿ ಪ್ರವಾಸಿಗರಿಗೆ ಹೆಲಿಕಾಪ್ಟರ್ ಸೇವೆಗಳನ್ನು ಲಭ್ಯಗೊಳಿಸಲಾಗಿದೆ. ಈ ಸೇವೆಗಳು ಲೇಹ್, ಪದಮ್, ಲಿಂಗ್ರ್ಶೆಡ್, ಕಾರ್ಗಿಲ್, ಡಿಬ್ಲಿಂಗ್, ನೇರಾಕ್, ಡಿಸ್ಕಿಟ್, ತುರ್ತುಕ್, ಶ್ರೀನಗರ ಮತ್ತು ಜಮ್ಮುವಿನಲ್ಲಿ ಮುಂದುವರಿಯುತ್ತದೆ. ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳಾದ್ದರಿಂದ ಇಲ್ಲಿಗೆ ಹೆಲಿಕಾಪ್ಟರ್‌ ಸೇವೆ ನೀಡಲಾಗಿದೆ.

ಪ್ರತಿ ವರ್ಷ ಲಕ್ಷಾಂತರ ಜನರು ಈ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಈ ಸ್ಥಳಗಳಿಗೆ ಭೇಟಿ ನೀಡಲು ಬಯಸುವವರು ರಸ್ತೆಯ ಮೂಲಕ ಹೋಗಬೇಕು. ಇದು ಹೆಚ್ಚು ಸಮಯ ತೆಗೆದುಕೊಳ್ಳುವುದರ ಜೊತೆಗೆ ರಸ್ತೆ ಪ್ರಯಾಣ ಹೆಚ್ಚು ಅಪಾಯಕಾರಿಯಾಗಿವೆ. ಪ್ರವಾಸಿಗರು ಹೆಲಿಕಾಪ್ಟರ್ ಸೇವೆಗಳ ಮೂಲಕ ತಮ್ಮ ನೆಚ್ಚಿನ ಸ್ಥಳಗಳನ್ನು ತ್ವರಿತವಾಗಿ ತಲುಪಬಹುದು. ಹೆಲಿಕಾಪ್ಟರ್ ಸೇವೆಯನ್ನು ಸಾಮಾನ್ಯರು ಮತ್ತು ಪ್ರವಾಸಿಗರು ಯಾರಾದರೂ ಪಡೆಯಬಹುದು. ಈಗಾಗಲೇ ಟಿಕೆಟ್ ಕಾಯ್ದಿರಿಸಿದ ಮೊದಲ ಬ್ಯಾಚ್ ಪ್ರವಾಸಿಗರು ಇದರ ಸೇವೆಯನ್ನು ಪಡೆಯುತ್ತಿದ್ದಾರೆ. ಹೆಲಿಕಾಪ್ಟರ್ ಸೇವಾ ಶುಲ್ಕದ ವಿವರಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ. (https://heliservice.ladakh.gov.in/)

ಸ್ಥಳೀಯ ಹವಾಮಾನ ಪರಿಸ್ಥಿತಿಗಳು ಮತ್ತು ಪರವಾನಗಿಗಳ ಆಧಾರದ ಮೇಲೆ ಸೇವೆಗಳನ್ನು ಒದಗಿಸಲಾಗುತ್ತದೆ. ಪ್ರಸ್ತುತ ಎರಡು ಹೆಲಿಕಾಪ್ಟರ್‌ಗಳು ಬಳಕೆಯಲ್ಲಿವೆ. ಒಂದು ಐದು ಆಸನಗಳ B-3 ಚಾಪರ್ ಮತ್ತು ಇನ್ನೊಂದು ದೊಡ್ಡ ಹೆಲಿಕಾಪ್ಟರ್, Mi-172. ಶೀಘ್ರದಲ್ಲೇ ಸೇವೆಗಳನ್ನು ಇನ್ನೂ ಕೆಲವು ಪ್ರದೇಶಗಳಿಗೆ ವಿಸ್ತರಿಸಲಾಗುವುದು. ಹೆಚ್ಚುವರಿಯಾಗಿ ಹೆಲಿಕಾಪ್ಟರ್‌ಗಳು ಲಭ್ಯವಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!