ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿಂಗಳುಗಳಿಂದ ಸಿಕ್ಕಾಪಟ್ಟೆ ಡಿಮ್ಯಾಂಡ್ನಲ್ಲಿದ್ದ ಕೆಂಪು ಸುಂದರಿ, ಇದೀಗ ದಿಢೀರನೆ ಡಲ್ ಹೊಡೆದಿದ್ದಾಳೆ.
ಕೈಗೆಟುದ ಬೆಲೆಯಲ್ಲಿ ಟೊಮ್ಯಾಟೊ ಕಂಗೊಳಿಸಿದ್ದು, ಜನರು ಟೊಮ್ಯಾಟೊ ತಿನ್ನೋದನ್ನೇ ನಿಲ್ಲಿಸಿದ್ದರು. ಆದರೆ ಇದೀಗ ಟೊಮ್ಯಾಟೊ ಬೆಲೆ ಏಕಾಏಕಿ ಕಡಿಮೆಯಾಗಿದೆ.
100,150,200 ರೂಪಾಯಿ ಇದ್ದ ಟೊಮ್ಯಾಟೊ ಬೆಲೆ ಇದೀಗ ದಿಢೀರನೆ 40 ರೂಪಾಯಿ ಆಗಿದೆ. ಹೆಚ್ಚೆಂದರೆ ಟೊಮ್ಯಾಟೊ ದರ 50 ರೂಪಾಯಿ ಆಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಮಳೆ ಹೆಚ್ಚಾಗಿ ಸುರಿಯುತ್ತಿದ್ದ ಕಾರಣ ಟೊಮ್ಯಾಟೊ ಬೆಲೆ ಹೆಚ್ಚಾಗಿತ್ತು. ಆದರೆ ಇದೀಗ ಮಳೆ ಕಡಿಮೆಯಾಗಿದ್ದು, ಟೊಮ್ಯಾಟೊ ಸರಬರಾಜು ಸರಾಗವಾಗಿ ಆಗುತ್ತದೆ. ಹಾಗಾಗಿ ಟೊಮ್ಯಾಟೊ ಬೆಲೆ ಕಡಿಮೆಯಾಗಿದೆ.