HEALTH| ಖಾಲಿ ಹೊಟ್ಟೆಗೆ ಹುರಿದ ಎರಡು ಬೆಳ್ಳುಳ್ಳಿ ತಿಂದರೆ ಅದೆಷ್ಟೋ ಆರೋಗ್ಯ ಪ್ರಯೋಜನಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಳ್ಳುಳ್ಳಿಯ ಸಾಂಬಾರ್‌ ಪದಾರ್ಥಗಳಲ್ಲಿ ಬಹುಬೇಡಿಕೆಯ ಪದಾರ್ಥ. ಯಾವುದೇ ಖಾದ್ಯ ಸುವಾಸನೆಯಿಂದ ಕೂಡಿರಬೇಕಾದರೆ ಬೆಳ್ಳುಳ್ಳಿ ಹಾಕಲೇಬೇಕು. ಪ್ರತಿದಿನ ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವಿಸಿದರೆ, ಅನೇಕ ಆರೋಗ್ಯ ಸಮಸ್ಯೆಗಳನ್ನು ತೊಡೆದುಹಾಕಬಹುದು. ಹಸಿ ಬೆಳ್ಳುಳ್ಳಿ ತಿನ್ನಲು ಸಾಧ್ಯವಾಗದಿದ್ದರೆ, ಹುರಿದು ತಿನ್ನಿ.

ಬೆಳ್ಳುಳ್ಳಿ ಎಸಳುಗಳನ್ನು ಸಿಪ್ಪೆ ಸುಲಿದು ಎಣ್ಣೆಯಲ್ಲಿ ಹುರಿಯಬೇಕು. ಪ್ರತಿದಿನ ಹುರಿದ ಬೆಳ್ಳುಳ್ಳಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಹೃದಯ ಸಂಬಂಧಿ ಸಮಸ್ಯೆಗಳು ಬರುವುದಿಲ್ಲ. ಪುರುಷರಲ್ಲಿ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಸತು ಮತ್ತು ವಿಟಮಿನ್ ಸಿ ಹೇರಳವಾಗಿದ್ದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ನಿಮಗೆ ದಣಿವು ಮತ್ತು ಆಲಸ್ಯವಾದಾಗ, ಈ ಹುರಿದ ಬೆಳ್ಳುಳ್ಳಿಯನ್ನು ತಿನ್ನುವುದು ನಿಮ್ಮನ್ನು ಹುರಿದುಂಬಿಸುತ್ತದೆ. ಅದರಲ್ಲೂ ಬೆಳಗ್ಗೆ ಇದನ್ನು ತಿಂದರೆ ಹೆಚ್ಚಿನ ಲಾಭ ಸಿಗುತ್ತದೆ. ಈ ಹುರಿದ ಬೆಳ್ಳುಳ್ಳಿ ತಿಂದರೆ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚುತ್ತದೆ. ಹುರಿದ ಬೆಳ್ಳುಳ್ಳಿ ಪುರುಷರ ಲೈಂಗಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿ ಎಸಳನ್ನು ಬೆಳಗ್ಗೆ ತಿಂದರೆ ಡ್ಯಾಂಡ್ರಫ್ ಸಮಸ್ಯೆಯೂ ಕಡಿಮೆಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!