ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯರಿಗೆ ಋತುಸ್ರಾವ ಎಂಬುದು ಒಂದು ಸಾಮಾನ್ಯ ಕ್ರಿಯೆ. ಋತುಸ್ರಾವದ ಸಂದರ್ಭ ಮಾನಿಸಿಕ ಹಾಗೂ ದೈಹಿಕವಾಗಿ ಬಲಹೀನವಾಗುವುದು ಪ್ರತಿಯೊಬ್ಬ ಮಹಿಳೆಯಲ್ಲೂ ಕಂಡು ಬರುವಂತಹುದು. ಈ ಋತುಚಕ್ರದ ಸಂದರ್ಭದಲ್ಲಿ ದೇಹದಲ್ಲಿ ಸಾಕಷ್ಟು ಪರಿಣಾಮಕಾರಿ ಬದಲಾವಣೆಗಳಾಗುತ್ತವೆ. ಋತುಚಕ್ರದ ನಂತರ, ಮಹಿಳೆಯರ ದೇಹದಲ್ಲಿ ಈಸ್ಟ್ರೊಜೆನ್ ಮಟ್ಟವು ಕಡಿಮೆಯಾಗುತ್ತದೆ ಇದರಿಂದಾಗಿ ಮೂಳೆಗಳು ದುರ್ಬಲಗೊಳ್ಳುತ್ತವೆ. ಈ ಸಮಸ್ಯೆಯಿಂದ ದೂರ ಇರಲು ಕೆಲವೊಂದು ಪರಿಣಾಮಕಾರೀ ಅಂಶಗಳಿವೆ.
ನಮ್ಮ ದೇಹವನ್ನು ಆರೋಗ್ಯಕರವಾಗಿಡಲು ಹಾಗೂ ಮೂಳೆಗಳು ದೃಢವಾಗಿ ಉಳಿಯುವಂತಾಗಲು ತರಕಾರಿಗಳನ್ನು ಹಾಗೂ ಸೊಪ್ಪುಗಳನ್ನು ಹೆಚ್ಚು ಸೇವಿಸಬೇಕು. ಬಾದಾಮಿ, ಎಳ್ಳು ಮತ್ತು ಗಸಗಸೆಗಳಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿರುತ್ತವೆ. ಇವುಗಳ ಸೇವನೆಯಿಂದ ಮೂಳೆ ಸಾಂದ್ರತೆಯನ್ನು ಹೆಚ್ಚಿಸಲು ಸಾಧ್ಯವಿದೆ. ಸಾಕಷ್ಟು ರೀತಿಯಲ್ಲಿ ಪೋಷಕಾಂಶಗಳು ದೇಹಕ್ಕೆ ಲಭಿಸುವಂತಾಗುತ್ತದೆ.
ದೇಸೀ ದನದ ಹಾಲು ಸೇವನೆಯಿಂದ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳು ಹೇರಳವಾಗಿ ಲಭ್ಯವಾಗುತ್ತವೆ. ಹಾಲು, ಮೊಸರು, ಬೆಣ್ಣೆ, ತುಪ್ಪ, ಪನ್ನೀರ್‌ಗಳನ್ನು ಈ ದಿನಗಳಲ್ಲಿ ಹೆಚ್ಚಾಗಿ ಸೇವಿಸುವುದು ಉತ್ತಮ. ಮೂಳೆ ಹಾಗೂ ದೇಹಾರೋಗ್ಯವನ್ನು ಹೆಚ್ಚಿಸಲು ಹಾಗೂ ಶಕ್ತಿ ಪಡೆಯಲು ಸಹಕಾರಿಯಾಗುತ್ತದೆ. ಮೂಳೆಗಳನ್ನು ಸದೃಢವಾಗಿಸಲು ನಿಯಮಿತ ವ್ಯಾಯಾಮವನ್ನು ದೈನಂದಿನ ಜೀವನದಲ್ಲಿ ರೂಢಿಸಿಕೊಳ್ಳುವುದು ಉತ್ತಮ. ಜೊತೆಗೆ ವಾಕಿಂಗ್, ಜಾಗಿಂಗ್‌ಗಳನ್ನು ದೈನಂದಿನ ಕ್ರಿಯೆಯ ಭಾಗವಾಗಿ ಮಾಡಿಕೊಳ್ಳಿ. ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.