ಭೂಕಬಳಿಕೆ ಪ್ರಕರಣ: ಇಡಿಯಿಂದ ಸಂದೇಶಖಾಲಿ ಆರೋಪಿ ಶೇಖ್ ಶಹಜಹಾನ್ ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಾಯಕ ಶೇಖ್ ಶಹಜಹಾನ್ ನನ್ನು ಜಾರಿ ನಿರ್ದೇಶನಾಲಯ(ಇಡಿ) ಶನಿವಾರ ಬಂಧಿಸಿದೆ.

ಈಗಾಗಲೇ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇಡಿ ಬಸಿರ್‌ ಹತ್ ಜೈಲಿನಲ್ಲಿ ಶೇಖ್‌ ನನ್ನು ವಿಚಾರಣೆ ನಡೆಸಿತು.

ಇದಕ್ಕೂ ಮೊದಲು ಕೇಂದ್ರ ತನಿಖಾ ದಳ(ಸಿಬಿಐ) ಬಂಧಿಸಿತ್ತು. ಸೋಮವಾರ, ಜೈಲು ಆಡಳಿತವು ಶೇಖ್‌ನನ್ನು ಪ್ರೊಡಕ್ಷನ್ ವಾರಂಟ್‌ನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ, ಅಲ್ಲಿಯವರೆಗೆ ಅವರು ಜೈಲಿನಲ್ಲೇ ಇರುತ್ತಾರೆ.

ಬಂಧಿತ ಶೇಖ್ ಷಹಜಹಾನ್ ವಿರುದ್ಧದ ಪಿಎಂಎಲ್‌ಎ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಹಲವು ಸ್ಥಳಗಳಲ್ಲಿ ಅರೆಸೇನಾ ಪಡೆಗಳೊಂದಿಗೆ ದಾಳಿ ನಡೆಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!