ಮತ್ತೆ ರೋಹಿತ್ ಹೆಗಲಿಗೆ ಮುಂಬೈ ಇಂಡಿಯನ್ಸ್?: ಕುತೂಹಲ ಕೆರಳಿಸಿದ ಈ ಫೋಟೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಐಪಿಎಲ್ ನಲ್ಲಿ ಈ ಬಾರಿ ಹಲವು ಬದಲಾವಣೆಗಳು ಗೊಚರಿಸುತ್ತಿದೆ.ಅದರಲ್ಲೂ ಮುಂಬೈ ಇಂಡಿಯನ್ಸ್(Mumbai Indians) ತಂಡ ನಾಯಕತ್ವ ವಿಚಾರದಲ್ಲಿ ಭಾರೀ ಸುದ್ದಿಯಲ್ಲಿದೆ.

ಇತ್ತ ಹಾರ್ದಿಕ್​ ಪಾಂಡ್ಯಗೆ ನಾಯಕತ್ವ ವಿರುದ್ಧ ಅಸಮಧಾನ ಹೆಚ್ಚುತ್ತಿದ್ದು, ಈ ಹಿನ್ನೆಲೆ ಮತ್ತೊಮ್ಮೆ ರೋಹಿತ್ ಶರ್ಮಾಗೆ(Rohit Sharma) ನಾಯಕತ್ವ ನೀಡುವ ಕುರಿತು ಮಾತುಕತೆ ನಡೆಯುತ್ತಿದೆ.

ಇದರ ಭಾಗವಾಗಿ ರೋಹಿತ್ ಅವರನ್ನು ಮನವೊಲಿಸಲು ಮ್ಯಾನೇಜ್‌ಮೆಂಟ್‌ ಸಭೆ ನಡೆಸಿದೆ ಎನ್ನಲಾಗಿರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವೈರಲ್​ ಆಗಿರುವ ಫೋಟೊದಲ್ಲಿ ಮುಂಬೈ ಫ್ರಾಂಚೈಸಿಯ ಮಾಲೀಕರಾದ ನೀತು ಅಂಬಾನಿ (Nita Ambani) ಮತ್ತು ಅವರ ಪುತ್ರ ಆಕಾಶ್ ಅಂಬಾನಿ (Akash Ambani) ಹಾಗೂ ಫ್ರಾಂಚೈಸ್‌ನ ಜಾಗತಿಕ ಪ್ರದರ್ಶನದ ಮುಖ್ಯಸ್ಥ ಮಹೇಲಾ ಜಯವರ್ಧನೆ (Mahela Jayawardene) ಮಹತ್ವದ ಸಭೆ ನಡೆಸುತ್ತಿರುವುದು ಕಂಡು ಬಂದಿದೆ.

ಹಾರ್ದಿಕ್​ ಪಾಂಡ್ಯಗೆ ನಾಯಕತ್ವ ನೀಡಿದ ವೇಳೆಯೇ ಮುಂಬೈ ಮತ್ತು ರೋಹಿತ್​ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಮುಂಬೈ ಆಡಿದ 2 ಪಂದ್ಯಗಳಲ್ಲಿ ಅತ್ಯಂತ ಹೀನಾಯ ಸೋಲು ಕಂಡಿದೆ. ಪಾಂಡ್ಯ ಬಗ್ಗೆ ಕೋಚ್​ಗಳಿಗೂ ಅಸಮಾಧಾನ ಇದೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ. ಕಳೆದ ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ ಸೋಲು ಕಂಡ ಬಳಿಕ ಆಕಾಶ್ ಅಂಬಾನಿ ಮತ್ತು ಟೀಮ್​ ಮ್ಯಾನೇಜ್‌ಮೆಂಟ್‌​ ರೋಹಿತ್​ ಬಳಿ ಚರ್ಚೆ ನಡೆಸುತ್ತಿರುವ ವಿಡಿಯೊ ಮತ್ತು ಫೋಟೊ ವೈರಲ್​ ಆಗಿತ್ತು. ಇನ್ನೊಂದು ಮೂಲಗಳ ಪ್ರಕಾರ ರೋಹಿತ್ ಮತ್ತೆ ತಂಡದ ನಾಯಕತ್ವ ವಹಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಹಾರ್ದಿಕ್‌ ಅವರ ನಾಯಕತ್ವದ ಬಗ್ಗೆ ತಂಡದ ಕೋಚ್‌ಗಳಿಗೂ ಮತ್ತು ಆಟಗಾರರಿಗೂ ಅಸಮಾಧಾನವಿದೆ ಎನ್ನಲಾಗಿದೆ. ಪ್ರಮುಖವಾಗಿ ಬೌಲರ್‌ಗಳ ನಿರ್ವಹಣೆಯಲ್ಲಿ ಹಾರ್ದಿಕ್‌ ಪಾಂಡ್ಯ ಪದೇಪದೇ ಎಡವಟ್ಟು ಮಾಡುತ್ತಿರುವುದಕ್ಕೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತವಾಗುತ್ತಿದೆ.

ತಂಡದ ಪ್ರಧಾನ ವೇಗಿ ಜಸ್​ಪ್ರೀತ್​ ಬುಮ್ರಾ ಅವರಿಗೆ ಇನಿಂಗ್ಸ್​ನ ಮೊದಲ ಓವರ್​ ನೀಡುವ ಬದಲು 5 ಓವರ್​ ಬಳಿಕ ಬೌಲಿಂಗ್​ ನೀಡುತ್ತಿದ್ದಾರೆ. ಇದೇ ವಿಚಾರದಲ್ಲಿ ಹಾರ್ದಿಕ್‌ರ ಮೇಲೆ ಬೌಲಿಂಗ್‌ ಕೋಚ್‌ ಲಸಿತ್‌ ಮಾಲಿಂಗ ಸಿಟ್ಟು ಮಾಡಿಕೊಂಡು ಎದ್ದು ಹೋಗುವಂತೆ ಕಾಣುವ ವಿಡಿಯೋವೊಂದು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿತ್ತು. ಅಲ್ಲದೆ ಪಂದ್ಯದ ಮುಕ್ತಾಯದ ವೇಳೆಯೂ ಮಾಲಿಂಗ ಅವರು ಪಾಂಡ್ಯ ಜತೆ ಸರಿಯಾಗಿ ಮಾತನಾಡಲು ಕೂಡ ನಿರಾಕರಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!