ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಲ್ಮನೆ ವಿಧಾನ ಪರಿಷತ್ನಲ್ಲಿ ಇಂದು ಭೂಕಂದಾಯ ಕಾಯ್ದೆಯ ಸೆಕ್ಷನ್ 95 ಮತ್ತು 96ಕ್ಕೆ ತಿದ್ದುಪಡಿ ಮಾಡುವ ಮೂಲಕ ಕೃಷಿಯೇತರ ಉದ್ದೇಶಗಳಿಗಾಗಿ ಭೂಪರಿವರ್ತನೆ ಪ್ರಕ್ರಿಯೆ ಸರಳೀಕರಣಗೊಳಿಸುವ ಭೂಕಂದಾಯ 2ನೇ ತಿದ್ದುಪಡಿ ವಿಧೇಯಕ ಅಂಗಿಕಾರಗೊಂಡಿದೆ.
ಈ ವಿಧೇಯಕ (ಡಿ.22) ರಂದು ಕೆಳಮನೆ ವಿಧಾನಸಭೆಯಲ್ಲಿ ಅಂಗಿಕಾರಗೊಂಡಿತ್ತು. ಇದೀಗ ಮೇಲ್ಮನೆ ಅಂಗೀಕಾರಗೊಂಡಿದ್ದು, ಈ ಮೂಲಕ ಇನ್ನು ಕಾಯ್ದೆಯಾಗಿ ಜಾರಿಯಾಗುವುದಕ್ಕೆ ಮಾತ್ರ ಬಾಕಿ ಇದೆ.
ಈ ತಿದ್ದುಪಡಿಯನ್ನು ತರುವುದು ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಗಳಿಗಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಕೃಷಿಭೂಮಿಯ ನಿವಾಸಿಗಳು ಅದನ್ನು ಸಂಪೂರ್ಣವಾಗಿ ಅಥವಾ ಅದರ ಭಾಗವನ್ನು ಬೇರೆ ಯಾವುದೇ ಉದ್ದೇಶಕ್ಕಾಗಿ ಬೇರೆಡೆಗೆ ವರ್ಗಾವಣೆಗೆ ಬಯಸಿದರೆ, ಅವರು ಅರ್ಜಿಯೊಂದಿಗೆ ಜಿಲ್ಲಾಧಿಕಾರಿಗಳಿಗೆ ಅಫಿಡವಿಟ್ ನ್ನು ಸಲ್ಲಿಸಬಹುದು. ಬಳಿಕ ಅರ್ಜಿ ಸ್ವೀಕರಿಸಿದ 7 ದಿನಗಳಲ್ಲಿ ಜಿಲ್ಲಾಧಿಕಾರಿ ಅನುಮೋದನೆ ನೀಡುತ್ತಾರೆ.ಅರ್ಜಿ ಸ್ವೀಕರಿಸಿದ 7 ದಿನಗಳಲ್ಲಿ ಡಿಸಿ (ಜಿಲ್ಲಾಧಿಕಾರಿ) ಅನುಮೋದನೆ ನೀಡಬೇಕು. ಮಾಸ್ಟರ್ ಪ್ಲಾನ್ ಪ್ರಕಟಿಸದಿದ್ದಲ್ಲಿ ಮತ್ತು ಜಮೀನು ಯೋಜನಾ ಪ್ರದೇಶದ ಹೊರಗೆ ಬಿದ್ದರೆ, ಅಧಿಕಾರಿಗಳು ಅರ್ಜಿಯನ್ನು ಸ್ವೀಕರಿಸಿದ ದಿನಾಂಕದಿಂದ 15 ದಿನಗಳಲ್ಲಿ ತಮ್ಮ ಅಭಿಪ್ರಾಯವನ್ನು ಒದಗಿಸಬೇಕು.ಯಾವುದೇ ಅಭಿಪ್ರಾಯವನ್ನು ನೀಡದಿದ್ದಲ್ಲಿ, ಭೂಮಿಯನ್ನು ಬೇರೆಡೆಗೆ ತಿರುಗಿಸಲು ಅಧಿಕಾರಿಗಳ ಅಭ್ಯಂತರವಿಲ್ಲ ಎಂದು ಪರಿಗಣನೆ, ನಂತರ ಡಿಸಿ ಅನುಮೋದನೆ ನೀಡಬೇಕು. ಅರ್ಜಿಯನ್ನು ಸ್ವೀಕರಿಸಿದ ದಿನಾಂಕದಿಂದ 30 ದಿನಗಳಲ್ಲಿ ಡಿಸಿ ನಿರ್ಧರಿಸಲು ಮತ್ತು ಆದೇಶವನ್ನು ನೀಡಲು ವಿಫಲವಾದರೆ ಅನುಮೋದನೆಯನ್ನು ನೀಡಲಾಗಿದೆ ಎಂದು ಪರಿಗಣನೆ.ಈ ಹಿನ್ನೆಲೆ ಈ ಕಾಯ್ದೆ ಜಾರಿಗೊಳಿಸಲಾಗುವುದು.